ಕಿಡಿಗೇಡಿಗಳು ಸಾಕು ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಅಬ್ಬಿಗುಂಡಿಯಲ್ಲಿ ನಡೆದಿದೆ.
ವಿಷದ ಆಹಾರ ತಿಂದು 8 ಸಾಕು ನಾಯಿಗಳು ಮೃತಪಟ್ಟಿವೆ. ಅಬ್ಬಿಗುಂಡಿ ವ್ಯಾಪ್ತಿಯ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಸಾಕು ನಾಯಿಗಳು ಸಾಕಿದ್ದರು, ಸತ್ತ ಕೋಳಿಗಳನ್ನು 8 ಸಾಕು ನಾಯಿಗಳು ಸೇವಿಸಿ ಸಾವನ್ನಪ್ಪಿವೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭಾರೀ ಮಳೆ; ಪುರಾತನ ಬಾವಿ ಕುಸಿತ
ಸತ್ತ ಕೋಳಿಗಳಿಗೆ ಕ್ರಿಮಿನಾಶಕ ಬೆರೆಸಿದ್ದರೆಂದು ತಿಳಿದು ಬಂದಿದೆ. ನಾಯಿಗಳಿಗೆ ವಿಷ ಇಟ್ಟವರೆ ವಿರುದ್ಧ ಸ್ಥಳೀಯರು ಇದೀಗ ಆಕ್ರೋಶ ವ್ಯಕ್ತಪಡಿಸಿ, ಕಿಡಿಗೇಡಿಗಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.





