ಕಳೆದ ಮೂರು ದಿನದ ಹಿಂದೇ ಕೆರೆಕಟ್ಟೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಇಬ್ಬರನ್ನು ಸಾಯಿಸಿದ, ಪುಂಡಾನೆಯನ್ನು ಭಗವತಿ ಕಾಡಿನಲ್ಲಿ ಭಾನುವಾರ ರಾತ್ರಿ ಸೆರೆ ಹಿಡಿಯಲಾಗಿದೆ.
ಕಾಡಾನೆ ದಾಳಿಯಿಂದ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ದಿನನಿತ್ಯ ಓಡಾಡಲು ಭಯ ಪಡುವ ದುಸ್ಥಿತಿ ಎದುರಾಗಿತ್ತು. ಆನೆ ದಾಳಿ ಕುರಿತು ಶೃಂಗೇರಿ ಕ್ಷೇತ್ರದ ಟಿ.ಡಿ ರಾಜೇಗೌಡ ಶಾಸಕರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದರು. ಹಾಗೆಯೇ, ಸಾವನಪ್ಪಿದವರ ಕುಟುಂಬದವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಯಿತು.
ಚಿಕ್ಕಮಗಳೂರು l ಕಾಡಾನೆ ದಾಳಿಗೆ ಇಬ್ಬರು ಸಾವು
ಅರಣ್ಯ ಇಲಾಖೆಯಿಂದ ಭಾನುವಾರ 6 ಆನೆಗಳನ್ನು ಕರೆಸಿ, ಪುಂಡಾನೇ ಸೆರೆ ಹಿಡಿಯಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕೆರೆಕಟ್ಟೆ ಗ್ರಾಮಸ್ಥರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.





