ಸಾವಿತ್ರಿಬಾಯಿ ಫುಲೆ 195ನೇ ಜನ್ಮ ದಿನದ ಅಂಗವಾಗಿ ಶೈಕ್ಷಣಿಕ ಕಾರ್ಯಾಗಾರ ಮತ್ತು ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಜ. 3ರಂದು ಚಿಕ್ಕಮಗಳೂರು ನಗರದ ಟಿಎಂಎಸ್ ಶಾಲೆ ಆವರಣದ ರೋಟರಿ ಹಾಲ್ ಬಳಿ ನಡೆಯಲಿದೆ.

ಮಾತೆ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯ ಅಂಗವಾಗಿ ಜ. 3ರಂದು ಮಧ್ಯಾಹ್ನ 2:30ಕ್ಕೆ ಟಿಎಂಎಸ್ ಶಾಲೆ ಆವರಣದ ರೋಟರಿ ಹಾಲ್ ಬಳಿ ನಡೆಯಲಿದೆ. ಹಾಗೆಯೇ, ಶೈಕ್ಷಣಿಕ ಕಾರ್ಯಗಾರ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಾಥಮಿಕ ಪ್ರೌಢ ಹಾಗೂ ಅನುದಾನಿತ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾಗಬೇಕಾಗಿ ತಮ್ಮಲ್ಲಿ ವಿನಂತಿಸುತ್ತಿದ್ದೇನೆಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಮುಖಂಡರಾದ ಸಿ.ಎಂ. ಜ್ಯೋತಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | KPS ಮ್ಯಾಗ್ನೆಟ್ ಯೋಜನೆ ಕೈಬಿಡದಿದ್ದರೆ ರಾಜ್ಯವ್ಯಾಪಿ ಹೋರಾಟ; AIDSO ಎಚ್ಚರಿಕೆ
ಈ ಕಾರ್ಯಕ್ರಮದ ಕುರಿತು ಶ್ರೀಮತಿ ಪುಷ್ಪಾವತಿ ಅಧ್ಯಕ್ಷರು ಮತ್ತು ಸದಸ್ಯರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದಿಂದ ಆಹ್ವಾನಿಸಲಾಗಿದೆ.





