ಕೊಳಚೆ ನೀರ, ಚರಂಡಿ ನೀರು ಹಾಗೆಯೇ ಶೌಚಾಲಯದ ನೀರು ಮನೆಯ ಬಾಗಿಲಿಗೆ ನಿಂತು, ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಎದುರಾಗಿರುವ ಘಟನೆ ಚಿಕ್ಕಮಗಳೂರು ನಗರದ ಅಂಬೇಡ್ಕರ್ ರಸ್ತೆ ವ್ಯಾಪ್ತಿಗೆ ಹೊಂದಿಕೊಂಡಿರುವ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ.
ಈ ಭಾಗದಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಇಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರುವುದು. ಪ್ರತಿನಿತ್ಯ ಈ ಭಾಗದಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡೇ ಹೋಗಬೇಕಾಗಿದೆ. ಅದರಲ್ಲಂತೂ ಮಳೆಗಾಲ ಬಂದರೆ ಶಾಂತಿನಗರ ಬಡಾವಣೆಯ ಜನರ ಪರದಾಟ ಹಾಗೂ ಅವರ ಜೀವನ ಶೈಲಿ ಅಸ್ತವ್ಯಸ್ತವಾಗುತ್ತಿದೆ.
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಳೆ ಬಂದರೇ, ಮಳೆಯ ನೀರು, ಕೊಳಚೆ, ಚರಂಡಿ ಶೌಚಾಲಯ ಗುಂಡಿಗಳಿಗೆ ಸೇರಿ ಎಲ್ಲಾ ನೀರು ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ. ಈ ವಿಚಾರವಾಗಿ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ನಮಗೆನೂ ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಸ್ಥಳೀಯರು ಈ ದಿನ. ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.
ಬಿದಿ ನಾಯಿಗಳ ಕಾಟ ಅಕ್ಕಪಕ್ಕದಲ್ಲಿ ಬಿಸಾಕುವಂತಹ ಕಸದ ರಾಶಿಗಳ ಗುಡ್ಡೆ, ಇದರಿಂದ ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ. ನಾನಾ ರೀತಿಯ ರೋಗಗಳು ಕಂಡುಬರುತ್ತವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನ ಮುಂದಾದರೂ ಸಂಬಂಧಪಟ್ಟಂತಹ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಆಲಿಸಿ ಬಗೆಹರಿಸುವರೆ ಕಾದುನೋಡಬೇಕಿದೆ.





