ದಶಕಗಳೇ ಕಳೆದರೂ ದಲಿತ ಸಮುದಾಯಕ್ಕೆ ಸೇರಿದ ಕಾರ್ಮಿಕರಿಗೆ ಭೂಮಿ, ವಸತಿ ಸಿಗದೇ ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮಡಲು ಗ್ರಾಮದ ನೀಡುವಾನಿಯಲ್ಲಿ ಸೋಮವಾರ ನಡೆದಿದೆ.

ಸರ್ಕಾರವು ವಸತಿ ಇಲ್ಲದವರಿಗೆ ವಸತಿ ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂದು ಹೇಳುತ್ತದೆ. ಆ ಜಾಗದಲ್ಲಿ ಎಕ್ಕರೆಗಟ್ಟಲೆಯಷ್ಟು ಭೂಮಿ ಇದ್ದರು ವಾಸ ಮಾಡಲು ಮನೆ ಇದ್ದರು, ಪ್ರಭಾವಿ ವ್ಯಕ್ತಿಗಳು ಕಟ್ಟಡ ಕಟ್ಟಿದರು ಯಾರು ಕೇಳುವವರಿಲ್ಲ. ಆದರೆ, ಎಡಮಡಲು ಗ್ರಾಮದ ನಿಡುವಾನಿ ದಲಿತ ಕುಟುಂಬದವರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ದಶಕಗಳೇ ಕಳೆದರೂ ಅಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪುವುದಿಲ್ಲ, ಕಷ್ಟ ಪಟ್ಟು ಕೂಲಿ ಮಾಡಿ ಬದುಕನ್ನು ಕಟ್ಟಿ ಕೊಳ್ಳಲು ಪರದಾಡುತ್ತ ಇದ್ದಾರೆ.

ಆಳುವ ಸರ್ಕಾರಕ್ಕಾಗಲಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗಾಗಲಿ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬೇರೆಡೆ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಯಾವಾಗ ಬೇಕಾದರೂ ಮಾಲೀಕರು ಕೆಲಸದಿಂದ ತೆಗೆಯಬಹುದು, ಬಾಡಿಗೆ ದುಬಾರಿ ಇದೇ, ಹೇಗೆ ನಿರ್ಮಾಣ ಮಾಡುತ್ತಾರೆ? ಎಂದು ಕರ್ನಾಟಕ ಜನಶಕ್ತಿ ಪ್ರಧಾನ ಸಂಚಾಲಕರಾದ ಕೆ ಎಲ್ ಅಶೋಕ್ ಈದಿನ. ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಕೊಪ್ಪ | ಸಿಗದ ನಿವೇಶನ ಸೌಲಭ್ಯ; ಸರ್ಕಾರಿ ಜಾಗದಲ್ಲಿ ಟೆಂಟ್ ನಿರ್ಮಿಸಿ ಹೋರಾಟಕ್ಕಿಳಿದ ಎಸ್ಟೇಟ್ ಕಾರ್ಮಿಕರು
ಈ ಸಂದರ್ಭದಲ್ಲಿ ಭೂ, ವಸತಿಹೀನ ಕಾರ್ಮಿಕರು, ತಾಲೂಕಿನ ತಹಶೀಲ್ದಾರ್, ಸ್ಥಳೀಯ ಜನರು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿ ಓ, ಗ್ರಾಮ ಲೆಕ್ಕಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರಿದ್ದರು.





