ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಚಿಕ್ಕೇರಿ ವ್ಯಾಪ್ತಿಯಲ್ಲಿ ನಗದು ಸಹಿತ ಚಿನ್ನಾಭರಣ ವಶ ಪಡಿಸಿ ಆರೋಪಿಯನ್ನು ಬಂಧಿಸಲಾಗಿದೆ.
ನಗದು ಸಹಿತ ಚಿನ್ನಾಭರಣ ದೋಚಿದ್ದ ಆರೋಪಿ ಕೋಡಿ ಕ್ಯಾಂಪ್‌ನ ಸೈಯದ್ ಸಾದಿಕ್ (22) ಎಂಬಾತ, ಶನಿವಾರ ಸಂಜೆ ಪಟ್ಟಣದ ತವಕ್ಕಲ್ ಎಂಬುವರ ಮನೆಯೊಳಗೆ ಮೇಲ್ಪಾವಣಿ ಶೀಟ್ ತೆಗೆದು ನುಗ್ಗಿರುವ ಸೈಯದ್ ಸಾದಿಕ್, ಮನೆ ಬೀರುವಿನಲ್ಲಿರಿಸಿದ್ದ 8.76 ಲಕ್ಷ ರೂ. ಮೌಲ್ಯದ 73.5 ಗ್ರಾಂ ತೂಕದ ಚಿನ್ನಾಭರಣ, 8.90 ಲಕ್ಷ ರೂ. ಕಳ್ಳತನ ಮಾಡಲಾಗಿತ್ತು. ಮನೆಯ ಮಾಲೀಕ ತವಕ್ಕಲ್ ನೀಡಿದ ದೂರಿನ ಹಿನ್ನೆಲೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪೊಲೀಸರ ತಂಡ ತನಿಖೆ ನಡೆಸಿ, ಕಳವು ನಡೆದ 24 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆದು 8.90 ಲಕ್ಷ ರೂ ನಗದು, 8.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂಪಡೆಯಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಭಿವೃದ್ಧಿ ಕುಂಠಿತ; ಮಾನಗೆಟ್ಟ ಸರ್ಕಾರವೆಂದ ಕೆ.ಎಲ್ ಅಶೋಕ್ ಕರ್ನಾಟಕ ಜನಶಕ್ತಿ
ಈ ವೇಳೆ ಪಿಎಸ್‌ಐ ನಾಗೇಂದ್ರ ನಾಯ್ಕ, ಮಂಜುನಾಥ ಮನ್ನಂಗಿ, ದೇವೇಂದ್ರ ರಾಥೋಡ್, ಎಎಸ್‌ಐ ರವಿ, ಪೇದೆಗಳಾದ ಪ್ರಕಾಶ್, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಮಧು, ಕಾಂತರಾಜು, ರಾಜೇಶ್ ಹಾಗೂ ಇನ್ನಿತರರಿದ್ದರು.





