ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಗ್ರಾಮ ಸಹಾಯಕರ ನೇಮಕಾತಿಯಲ್ಲಿ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ದೌರ್ಜನ್ಯ ಜಿಲ್ಲಾ ಮಟ್ಟದ ಜಾಗೃತ ಸಮಿತಿಯಿಂದ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.

ಕಡೂರು ತಾಲೂಕು ಕಚೇರಿ ವ್ಯಾಪ್ತಿಯಲ್ಲಿ ಸುಮಾರು 64 ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಎಸ್ಸಿ, ಎಸ್ಟಿ ಸೇರಿದಂತೆ ಬಿಸಿಎಂ, ಮಡಿವಾಳ, ಲಿಂಗಾಯುತ ಹೀಗೆ ಎಲ್ಲಸೇರಿ 64 ಮಂದಿ ಇದ್ದಾರೆ. 1978ರ ಸರಕಾರದ ಸುತ್ತೋಲೆಯ ಪ್ರಕಾರ ರಾಜ್ಯದ ಯಾವುದೇ ಮೂಲೆಗಳಲ್ಲಿ ಗ್ರಾಮ ಸಹಾಯಕರನ್ನು ನೇಮಕ ಮಾಡುವಾಗ ಸರಕಾರದ ನಿಬಂಧನೆಯಂತೆ ಈ ಹಿಂದೆ ಗ್ರಾಮದ ಕೆಲಸವನ್ನು ಮಾಡುತ್ತಿರುವ ತೋಟಿಗಳು ನೀರುಗಂಟಿ, ತಳಹಾರಿಗಳು, ವಾಲಿಕಾರಿಗಳು, ಮಹರ್‌ರು ಬಾರ್‌ಕರ್ಸ, ತಳವಾರರು, ಸೋತಸ್ಯಾಂಡೀಸ್, ಕುಳುವಾಡಿಗಳು ಊರುಗನಿಗಳ ಮತ್ತು ಕುಟುಂಬದ ಸದಸ್ಯರನ್ನು ನೇಮಿಸಿಕೊಳ್ಳಬೇಕು ಎಂಬ ಸರಕಾರದ ಆದೇಶ ಸ್ಪಷ್ಟವಾಗಿದೆ. ಆದರೆ, ಈ ನಿಯಮವನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಮಾಜಿ ಸದಸ್ಯ ಪ್ರಶಾಂತ್ ಕಡೂರಹಳ್ಳಿ ತಿಳಿಸಿದರು.

ಕಡೂರು ಕಚೇರಿಯಲ್ಲಿ ಖಾಲಿಯಿದ್ದ ಒಂದು ಗ್ರಾಮ ಸಹಾಯಕರ ಹುದ್ದೆಯನ್ನು ಎಸ್ಸಿ, ಎಸ್ಟಿ ಅಭ್ಯರ್ಥಿ ಅರ್ಜಿ ಹಾಕಿದ್ದರೂ ಕೂಡ ಮೇಲ್ವರ್ಗದವರಿಗೆ ನೀಡಲಾಗಿದೆ. ಹೀಗಾಗಿ ನೇಮಕಾತಿ ಮಾಡಿದ ಅಧಿಕಾರಿ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿಯಲ್ಲಿ ಕೇಸು ದಾಖಲು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ದೌರ್ಜನ್ಯ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಅಗ್ರಹಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು: ಐಸಿರಿ ಫೌಂಡೇಶನ್; ಡಿ.23ರಂದು’ರೈತ ದೇವೋಭವ,’ಐಸಿರಿ ಫಿಟ್ನೆಸ್ ಚೆಕ್ ಕಾರ್ಯಕ್ರಮ
ಈ ಸಂದರ್ಭದಲ್ಲಿ ದಲಿತ ದೌರ್ಜನ್ಯ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಮಾಜಿ ಸದಸ್ಯ ಪ್ರಶಾಂತ್ ಕಡೂರುಹಳ್ಳಿ, ರೇವಣ್ಣ, ಪ್ರಕಾಶ್, ರವಿಕುಮಾರ್ ಹಾಗೂ ಇತರರಿದ್ದರು





