ಯುವಕನೊಬ್ಬ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿ ಬೇರೊಂದು ಯುವತಿ ಜೊತೆ ವಿವಾಹವಾಗುವ ಸಂದರ್ಭದಲ್ಲಿ ಘರ್ಷಣೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಲ್ಯಾಣ ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಸುಮಾರು 10 ವರ್ಷದಿಂದ ಕಲ್ಯಾಣ ನಗರದ ಶರತ್ ಎಂಬಾತ ಯುವಕ ಬೇಲೂರು ಮೂಲದ ಅಶ್ವಿನಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದು ನಂಬಿಸಿ, 5 ಲಕ್ಷ ಹಣವನ್ನು ಸಹ ಪಡೆದಿದ್ದ ಎನ್ನಲಾಗಿದೆ. ಹಾಗೆಯೇ ಇದಕ್ಕಿಂತ ಮೊದಲೇ ಇನ್ನೊಂದು ಹೆಣ್ಣನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಳ್ಳತನ ಪ್ರಕರಣ; ಅಡಿಕೆ ಸಾಗಾಟ
ನನ್ನನ್ನು ಪ್ರೀತಿಸಿ ನಂಬಿಸಿ ಮೋಸ ಮಾಡಿ ಬೇರೆ ಯುವತಿಯ ಜೊತೆ ಮದುವೆಯಾಗಲು ಶರತ್ ಮುಂದಾಗಿದ್ದಾನೆ. ಯುವಕನ ಮನೆ ಹಾಗೂ ಕಲ್ಯಾಣ ಮಂಟಪಕ್ಕೆ ಹೋಗಿ ಪ್ರೀತಿಸಿದ ಯುವತಿ ಗಲಾಟೆ ಮಾಡಿದ್ದಾರೆ. ಈ ಕುರಿತು ಎಂಟು ತಿಂಗಳ ಹಿಂದೆಯೇ ಯುವಕನ ವಿರುದ್ಧ ದೂರು ದಾಖಲಿಸಲಾಗಿತ್ತು ಎನ್ನಲಾಗಿದೆ. ಈ ಘಟನೆ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





