ಚಿಕ್ಕಮಗಳೂರು | ‘ಬೇಡದ ವಿಚಾರಗಳಿಗೆ ಯೋಚಿಸುತ್ತಿದ್ದರೆ ಬದುಕು ಹಸನಾಗುವುದಿಲ್ಲ’; ಮರುಳಾಸಿದ್ದ ಸ್ವಾಮಿಜಿ

Date:

ಚಿಕ್ಕಮಗಳೂರು ತಾಲೂಕಿನ ಕಳಸಪುರದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿಯವರ ನೂತನ ದೇವಾಲಯ ಪ್ರವೇಶ, ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ಶಿಖರ ಕಳಸಸ್ಥಾಪನೆ, 108 ಕುಂಭಾಭಿಷೇಕ ಹಾಗೂ ಶ್ರಿ ಸ್ವಾಮಿಯವರ ಬ್ರಹ್ಮ ರಥ ನಿಲಯದ ಲೋಕಾರ್ಪಣೆ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಯಿತು. 

‘ನಮ್ಮ ಕಷ್ಟಗಳಿಗೆ, ನಮ್ಮ ನೋವುಗಳಿಗೆ ಸ್ಪಂದಿಸೋದಕ್ಕೆ ಅನುಗ್ರಹ ಮಾಡೋದಕ್ಕೆ ದೇವರಿದ್ದಾನೆಪ್ಪ ಅನ್ನುವಂತಹ ನಂಬಿಕೆಯನ್ನು ಜಾಗೃತಗೊಳಿಸುವಂತಹ ನಿಟ್ಟಿನೊಳಗೆ ಇಷ್ಟೆಲ್ಲಾ ಆಚಾರ ವಿಚಾರಗಳನ್ನು ಮಾಡಿಕೊಂಡು ಬರುತ್ತಿರತಕ್ಕಂತದ್ದು. ಆ ನಂಬಿಕೆಯನ್ನು ಇಟ್ಟುಕೊಂಡು ನಾವೆಲ್ಲರೂ ಕೂಡ ಪ್ರಾಮಾಣಿಕವಾಗಿ ಇರಬೇಕೇ ಹೊರತು, ಅದನ್ನು ಹೊರತುಪಡಿಸಿ ಅನ್ಯರನ್ನು ಅಂದುಕೊಳ್ಳುತ್ತಾ, ಅನ್ಯರ ಬಗ್ಗೆ ಆಡಿಕೊಳ್ಳುತ್ತಾ ನಾವು ಕೂತ್ಕೊಂಡ್ವಿ ಅಂತ ಹೇಳಿದರೆ, ಖಂಡಿತವಾಗಿಯೂ ನಮ್ಮ ಬದುಕು ಹಸನಾಗುವುದಕ್ಕೆ ಸಾಧ್ಯವಾಗೋದೇ ಇಲ್ಲ’ ಎಂದು ದೊಡ್ಡಕುರುಬರಹಳ್ಳಿ ಬಸವತತ್ವ ಪೀಠದ ಶ್ರೀ ಮರುಳಾಸಿದ್ದ ಸ್ವಾಮಿಜಿ ಮಾತಾಡಿದರು.

ಸ್ವಾತಂತ್ರ್ಯದ ನಂತರ 78 ವರ್ಷದಲ್ಲಿ ವಿದ್ಯಾವಂತರ ಸಂಖ್ಯೆ 95% ಕ್ಕೆ ನಾವೇನು ತಲುಪಿದ್ದೇವೆ, ಅದೇ ರೀತಿ ಸುಸಂಸ್ಕೃತ ನಾಗರಿಕರ ಸೃಷ್ಟಿಯಾಗಬೇಕು ಅಂತ ನಮ್ಮ ಯೋಚನೆಗಳು ಇರುತ್ತವಲ್ಲಾ ವಿದ್ಯಾವಂತರು ಜಾಸ್ತಿ ಆದಂತೆಲ್ಲಾ. ಆದರೆ ಸ್ವತಂತ್ರ ಪೂರ್ವದಲ್ಲಿ ಶೇಕಡ 89 ರಷ್ಟು ಜನ ಅವಿದ್ಯಾವಂತರಿರುವಂತ ಸಮಾಜದಲ್ಲಿ ನಡೆಯುವಂತಹ ಕ್ರೈಮ್ಗಳಿಗಿಂತ  ಈಗ 95% ಇದ್ದ ವಿದ್ಯಾವಂತರ ಸಂಖ್ಯೆಯಲ್ಲಿ ಕ್ರೈಮ್ಗಳ ಸಂಖ್ಯೆ ಜಾಸ್ತಿಯಾಗಿದೆ ಅಂತ ಹೇಳಿದೆ. ಅಂದರೆ ಒಂದು ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು, ಅಪರಾಧಿಗಳ ಸಂಖ್ಯೆ ಕಡಿಮೆಯಿತ್ತು. ಆದರೆ ಇವತ್ತು ವಿದ್ಯಾವಂತರ ಸಂಖ್ಯೆ ಶೇಕಡ 100 ಮುಟ್ಟುತ್ತೆ ಸ್ವಲ್ಪ ದಿವಸ ಹೋದರೆ, ಆದರೆ ಅತ್ತಂದಿನ ಅಪರಾಧಗಳ ಸಂಖ್ಯೆಗಿಂತ ಈ ವಿದ್ಯಾವಂತ ನಾಗರಿಕ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಜಾಸ್ತಿಯಾಗಿದೆ ಅಂತ ಹೇಳುವಾಗ, ನಮ್ಮ ಶಿಕ್ಷಣ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳು ಸಮಾಜದಲ್ಲಿರುವಂತಹ ನಾಗರಿಕರನ್ನ ಒಂದು ಸುಸಂಸ್ಕೃತವಾದಂತಹ ಸಮಾಜವನ್ನ ನಿರ್ಮಾಣ ಮಾಡಬೇಕಾದಂತಹ ಅವಶ್ಯಕತೆಗಳ ನಡುವೆ ಇವತ್ತು ಪೂಜ್ಯ ಸ್ವಾಮೀಜಿಯವರು ಈ ದೇವಸ್ಥಾನಗಳಿಗೆ ಚಾಲನೆಯನ್ನು ಕೊಟ್ಟು ಅಧಿಕೃತವಾದಂತಹ ಬಿಡುಗಡೆ ಮಾಡುವಂತ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಎಂಪಿ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಿಕ್ಕಮಗಳೂರು ವಿಧಾನಸಭೆ ಶಾಸಕ ಹಚ್ ಡಿ ತಮ್ಮಯ್ಯ ಮಾತನಾಡಿ ’12ನೇ ಶತಮಾನದಲ್ಲಿ ಏನು ಜಗಜ್ಯೋತಿ ಬಸವೇಶ್ವರರು ಶೋಷಿತ ವರ್ಗದವರನ್ನ ಸಮಾಜದ ಮುನ್ನೆಲೆಗೆ ತರಬೇಕು, ಸಮ ಸಮಾಜವನ್ನ ನಿರ್ಮಾಣ ಮಾಡಬೇಕು ಅನ್ನೋ ಒಂದು ದೃಷ್ಟಿಯಿಂದ ವಚನ ಸಾಹಿತ್ಯದ ಮುಖಾಂತರ ಜನರಲ್ಲಿ ಇರ್ತಕ್ಕಂತ ಮೂಢನಂಬಿಕೆಗಳನ್ನ ದೂರ ಮಾಡಿ, ಎಲ್ಲಾ ಶೋಷಿತ ವರ್ಗದವರಿಗೆ ಉಚಿತ ದಾಸೋಹ, ಅನ್ನ ದಾಸೋಹ, ಉಚಿತ ಜ್ಞಾನ ದಾಸೋಹದ ಮುಖಾಂತರ ಅವರನ್ನ ಸಮಾಜದ ಮುನ್ನೆಲೆಗೆ ತರುವ ಸಂದರ್ಭದಲ್ಲಿ ಜನರಲ್ಲಿ ಇದ್ದಂತಹ ಮೂಢನಂಬಿಕೆಗಳನ್ನ ದೂರ ಮಾಡುವ ಪ್ರಯತ್ನವನ್ನ ಅವತ್ತು ಜಗಜ್ಯೋತಿ ಬಸವೇಶ್ವರರು ಮಾಡಿದರು.ಅದರ ನಂತರ ಬಂದಿರತಕ್ಕಂತ ಎಲ್ಲಾ ಇಲ್ಲಿ ವೇದಿಕೆ ಮೇಲೆ ಕೂತಿರ್ತಕ್ಕಂತ ಬಸವಾದಿ ಶರಣರು ಜನರಲ್ಲಿ ಇರ್ತಕ್ಕಂತ ಮೂಢನಂಬಿಕೆಗಳನ್ನ ದೂರ ಮಾಡೋದರ ಮುಖಾಂತರ ಜನರನ್ನ, ಶೋಷಿತ ವರ್ಗದವರನ್ನ ಉತ್ತಮ ಶಿಕ್ಷಣವನ್ನ ಕೊಡಿಸಿ ಸಮಾಜದ ಮುನ್ನೆಲೆಗೆ ತರುವ ಪ್ರಯತ್ನವನ್ನ ಮಾಡಿದರು. ಮೂಢನಂಬಿಕೆ ಅಂದ್ರೆ ಯಾವುದು ಅಂತ ಹೇಳಿದ್ರೆ, ಅದು ಲೋಕಸಭಾ ಸದಸ್ಯರಾಗಿರತಕ್ಕಂತ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ರಲ್ಲ – ಯಾರು ಧಾರ್ಮಿಕ ದತ್ತಿ ಮಂತ್ರಿ ಆಗ್ತಾರೆ ಅವರಿಗೆ ಮುಂದೆ ಏಳಿಗೆ ಆಗಲ್ಲ ಅಂತ ಎಲ್ಲ ಮಾತಾಡ್ತಿದ್ರು ಅಂತ, ಅದು ಮೂಢನಂಬಿಕೆ. ಯಾಕೆ ಅಂದ್ರೆ ಅದಕ್ಕೆ ಉದಾಹರಣೆ ಅವರೇ. ಅವರು ಧಾರ್ಮಿಕ ದತ್ತಿ ಮಂತ್ರಿಯಾಗಿ ಇಳಿದ ಮೇಲೆ ಹಲವಾರು ಒಳ್ಳೊಳ್ಳೆ ಹುದ್ದೆಗಳು ಬಂದು ಇವತ್ತು ಸಂಸತ್ ಸದಸ್ಯರಾಗಿದ್ದಾರೆ. ಯಾರು ಅಂದುಕೊಳ್ತಾ ಇದ್ರಲ್ಲ ಜನ ಧಾರ್ಮಿಕ ದತ್ತಿ ಮಂತ್ರಿ ಆದ್ರೆ ಒಳ್ಳೆದಾಗಲ್ಲ ಅಂತ, ಅದು ಮೂಢನಂಬಿಕೆ ಎಂದು ಹೇಳಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕೇಂದ್ರ,ರಾಜ್ಯ ಅರಣ್ಯ ಕಾಯ್ದೆ: ರೈತ, ಕಾರ್ಮಿಕರಿಗೆ ಸಂಕಷ್ಟ; ಮಲೆನಾಡು ರೈತ, ಕಾರ್ಮಿಕ ಹಿತರಕ್ಷಣಾ ಸಮಿತಿ

ಈ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಅಭಿವೃದ್ಧಿ  ಸಮಿತಿಯ ಸದಸ್ಯರು, ಶ್ರೀ ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಸದಸ್ಯರು, ಕಳಸಾಪುರ, ಗಾಣಿಹಳ್ಳಿ, ಅಣ್ಮಿಂದಡಿಕೆ, ಹುಲ್ಲೆನಹಳ್ಳಿ, ದೇವಗೊಂಡನಹಳ್ಳಿ, ಕಟ್ಟೇತಿಮ್ಮನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು, ಭಕ್ತಾಧಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...