ಆನ್‌ಲೈನ್ ಟ್ರೇಡಿಂಗ್ 4.36 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ನಡೆದಿದೆ.
ವಂಚನೆಗೊಳಗದ ಮಹಿಳೆ ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಮೊದಲಿನಿಂದಲೂ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು. ಇತ್ತೀಚೆಗೆ ಅವರು ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ, ಜನವರಿ 27 ರಂದು ವಾಟ್ಸಾಪ್ ಮೂಲಕ ರಕ್ಷಿತ ವೇದ ಮತ್ತು ಆನಂದ್ ದಾಲ್ಮೀಯಾ ಎಂಬ ಹೆಸರಿನ ವ್ಯಕ್ತಿಗಳು ಮಹಿಳೆಯನ್ನು ಸಂಪರ್ಕಿಸಿ ಐಪಿಒ (IPO) ಹಂಚಿಕೆ ಮಾಡಿಸುವುದಾಗಿ ನಂಬಿಸಿ, ‘FisdPro’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಸಿ, ಆರಂಭಿಕ ಹೂಡಿಕೆ ಮತ್ತು ಆ್ಯಪ್ ಬಳಕೆಯ ಶುಲ್ಕದ ಹೆಸರಿನಲ್ಲಿ ವಿವಿಧ ದಿನಾಂಕಗಳಂದು ಹಂತಹಂತವಾಗಿ ಒಟ್ಟು 4,36,900 ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಸ್ತೆ ಅಪಘಾತ ; ವ್ಯಕ್ತಿ ಸಾವು
ಮಹಿಳೆಯು ಆ್ಯಪ್‌ನಲ್ಲಿ ತಮಗೆ ಬಂದ ಲಾಭದ ಹಣವನ್ನು ವಿತ್‌ಡ್ರಾ ಮಾಡಲು ಹೋದಾಗ ಅದು ಸಾಧ್ಯವಾಗಿಲ್ಲ, ಆಗಲೇ ತಮಗೆ ಮೋಸ ಹೋಗಿರುವುದು ಖಚಿತವಾದ ನಂತರ ಈ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.





