ಚಿಕ್ಕಮಗಳೂರು ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯಲಿರುವುದರಿಂದ ಜನವರಿ 5:ಮತ್ತು 6 ರಂದು ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಹಾಲೇನಹಳ್ಳಿಯಿಂದ ಅಲ್ಲಂಪುರ ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆಯ ಕೋರಿಕೆ ಮೇರೆಗೆ ಈ ಕೆಲಸ ನಡೆಯುತ್ತಿದ್ದು, ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕೆಂಪನಹಳ್ಳಿ ಮತ್ತು ತ್ರಿವಿಕ್ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇದನ್ನು ಓದಿದ್ದೀರಾ?ಹಾಸನ | ಕ್ಷುಲ್ಲಕ ಕಾರಣ; ಯುವಕನಿಗೆ ಚಾಕು ಇರಿತ
ಇದರಿಂದಾಗಿ ರತ್ನಗಿರಿ ಬಡಾವಣೆ, ಚಂದ್ರನಗರ, ಕೆಂಪನಹಳ್ಳಿ, ಬಾಳೇಹಳ್ಳಿ, ಕರ್ಕಿಪೇಟೆ, ರಾಮನಹಳ್ಳಿ, ಅಲ್ಲಂಪುರ ಹಾಗೂ ಹಾಲೇನಹಳ್ಳಿಯ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗಲಿದ್ದು, ಸಾರ್ವಜನಿಕರು ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.





