ಚಿಕ್ಕಮಗಳೂರು ಭಾಗದ ಗ್ರಾಮೀಣ ವ್ಯಾಪ್ತಿಯಲ್ಲಿ 11 ಕೆ.ವಿ ಫೀಡರ್ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಜ. 21 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.
ಹಿರೇಮಗಳೂರಿನ 66/11 ಕೆ.ವಿ. ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಮಾಗಡಿ, ಚಿಕ್ಕನಹಳ್ಳಿ, ಕುರುವಂಗಿ ಫೀಡರ್‌ಗಳು ಹಾಗೂ ಮುಗಳವಳ್ಳಿಯ 220/66/11 ಕೆ.ವಿ. ವಿದ್ಯುತ್ ಕೇಂದ್ರದ ಮುಗಳವಳ್ಳಿ ಇಂಡಸ್ಟ್ರಿಯಲ್ ಫೀಡರ್ ವ್ಯಾಪ್ತಿಯಲ್ಲಿ ಈ ಅಡಚಣೆ ಇರಲಿದೆ. ಇದರ ಪರಿಣಾಮವಾಗಿ ಗೋಕುಲಾ ಫಾರಂ, ಗೌಡನಹಳ್ಳಿ, ಮುಗಳವಳ್ಳಿ, ಮಾಗಡಿ, ನಾಗರಹಳ್ಳಿ, ಕಬ್ಬಿಗೆರೆ, ಕರ್ತಿಕರೆ, ಬಂಡಿಹಳ್ಳಿ, ಕನ್ನೇನಹಳ್ಳಿ, ಕುರುವಂಗಿ, ಬಿಳೇಕಲ್, ನೆಟ್ಟೇಕೆರೆಹಳ್ಳಿ, ಸಗನಿಪುರ, ಚಿಕ್ಕನಹಳ್ಳಿ, ಹೊಸಲಕ್ಯಾ, ಗಾಣದಾಳು, ಕ್ಯಾತನಬೀಡು ಮತ್ತು ಮುಗಳವಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ನ್ಯಾಯಾಲಯ ಆವರಣ; ಗಣಪತಿ ದೇವಾಲಯ ನಿರ್ಮಿಸದಂತೆ ದಸಂಸ ಹೋರಾಟದ ಎಚ್ಚರಿಕೆ
ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಈ ಕಾಮಗಾರಿಗೆ ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.





