ಚಿಕ್ಕಮಗಳೂರು ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಎಂಬುವವರಿಗೆ ಸೇರಿದ ಜೆ.ಸಿ.ಬಿಯನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿದ್ದು, ಓರ್ವ ಬಡ ಪ. ಜಾತಿಯ ಕುಟುಂಬಕ್ಕೆ ನಷ್ಟ ಉಂಟು ಮಾಡಿರುವುದನ್ನು ದಲಿತ, ಜನಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತೇವೆಂದು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ನಗರದ ಎಂ.ಜಿ ರಸ್ತೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎದುರು ಸುಮಾರು ಒಂದು ತಿಂಗಳಿಂದ ನೊಂದವರು ಮತ್ತು ಹೋರಾಟಗಾರರು ಹಗಲು-ರಾತ್ರಿ ಧರಣಿ ಮಾಡಲಾಗುತ್ತಿದ್ದರು ಸಹ ಯಾವುದೇ ಅಧಿಕಾರಿಗಳಿಂದಾಗಲೀ, ಮತ್ತು ಇಲಾಖೆಗಳಿಂದಾಗಲೀ ಹಾಗೂ ಜನ ಪ್ರತಿನಿಧಿಗಳಿಂದಾಗಲೀ ನ್ಯಾಯ ದೊರಕಿರುವುದಿಲ್ಲ. ಮಂಜುನಾಥ್ ಒಳ್ಳೆ ರೀತಿ ಬದುಕು ಕಟ್ಟಿಕೊಳ್ಳುವ ಕನಸ್ಸು ಕಟ್ಟಿಕೊಂಡು ಸಾಲ ಮಾಡಿ 7ಲಕ್ಷ ಮುಂಗಡ ಹಣವನ್ನು ಬ್ಯಾಂಕ್‌ಗೆ ಪಾವತಿಸಿ, ಸುಮಾರು 17 ತಿಂಗಳ ಕಂತುಗಳನ್ನು ಒಟ್ಟು 18 ಲಕ್ಷ ಜೆ.ಸಿ.ಬಿ ಖರೀದಿಗಾಗಿ ಭರಿಸಿದ್ದಾರೆ. ಕೇವಲ 2 ಕಂತು ಹಣ ಕಟ್ಟಿದ ಕಾರಣ ಬ್ಯಾಂಕ್‌ನವರು ಏಕಾ ಏಕಿ ನೊಟೀಸ್ ನೀಡದೆ, ಜೆ.ಸಿ.ಬಿಯನ್ನು ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿರುತ್ತಾರೆ. 33 ಲಕ್ಷ ಬೆಲೆಬಾಳುವ ಕೇವಲ ಒಂದುವರೆ ವರ್ಷದ ಜೆ.ಸಿ.ಬಿಯನ್ನು ಕೇವಲ 22 ಲಕ್ಷ ರೂ.ಗಳಿಗೆ ಬೇರೆಯವರಿಗೆ ಮಾರಾಟ ಮಾಡಿದ್ದು, ಆರ್.ಬಿ.ಐ ನಿಯಮಗಳನ್ನು ಉಲ್ಲಂಘಿಸಿ, ಮಂಜುನಾಥ್ ಕುಟುಂಬಕ್ಕೆ ಜೆ.ಸಿ.ಬಿ ಮತ್ತು ಹಣವನ್ನೂ ಸಹ ಇಲ್ಲದಂತೆ ಮಾಡಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಆರ್ಥಿಕ ದುಸ್ಥಿತಿಗೆ ಕಾರಣರಾಗಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಾನ್ಯತೆಯನ್ನು ಒತ್ತಾಯಿಸುತ್ತದೆ. ಈ ಕೂಡಲೇ ರದ್ದುಪಡಿಸುವಂತೆ ಒಕ್ಕೂಟದಿಂದ ತಿಳಿಸಿದರು.
ಕಳೆದ 1 ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದರೂ ಹೋರಾಟಗಾರರ ಮನಸ್ಥಿತಿಯನ್ನು ನಿರ್ಲ್ಯಕ್ಷಿಸುತ್ತಿರುವ ಜಿಲ್ಲಾಡಳಿತ, ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಇಲಾಖೆ, ಜನ ಪ್ರತಿನಿಧಿಗಳ ನಡೆಯನ್ನು ತೀವ್ರವಾಗಿ ಖಂಡಿಸಿ, ದಿನಾಂಕ : 02/03/2026 ರಂದು ಒಕ್ಕೂಟ ಸಭೆ ಸೇರಿ ವಿವಿಧ ರೀತಿಯ ವಿಭಿನ್ನ ಮಾಧರಿಯ ಹೋರಾಟವನ್ನು ರೂಪಿಸಲು ತೀರ್ಮಾನಿಸಿದೆ. ದಿನಾಂಕ 04/03/2026 ರಂದು ಬೆಳಿಗ್ಗೆ 11:00 ಗಂಟೆಗೆ ನಗರದ ಹನುಮಂತಪ್ಪ ವೃತ್ತದಿಂದ ಮೆರವಣೆಗೆಯಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಡಳಿತ ಮಂಡಳಿಯವರ ಪ್ರತಿಕೃತಿಯನ್ನು ಶವಯಾತ್ರೆ ಮೂಲಕ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮುಂಭಾಗಕ್ಕೆ ತಂದು ಅನಿರ್ಧಿಷ್ಟ ಅವಧಿ ಮುಷ್ಕರದಲ್ಲಿ ಇರಿಸಲಾಗುತ್ತದೆ. ಅನಿರ್ಧಿಷ್ಟ ಅವಧಿಯವರೆಗೆ ಧರಣಿ ಮುಂದುವರೆಯುತ್ತದೆ. ಜಿಲ್ಲಾ ಉಸ್ತುವಾರಿ ಕಛೇರಿ ಮುಂದೆ, ಚಿಕ್ಕಮಗಳೂರು ಶಾಸಕರ ಮನೆಯ ಮುಂದೆ ಮತ್ತು ಮೂಡಿಗೆರೆ ಶಾಸಕರ ಮನೆಯ ಮುಂದೆ ಅನಿರ್ಧಿಷ್ಟ ಅವಧಿ ಮುಷ್ಕರ, ತಮಟೆ ಚಳುವಳಿ, ಕರಪತ್ರ ಚಳುವಳಿ, ಪಂಜಿನ ಮೆರವಣಿಗೆ ಹಾಗೂ ಅರೆಬೆತ್ತಲೆ ಚಳುವಳಿ ಮಾಡಲು ಒಕ್ಕೂಟದ ಸಭೆಯು ನಿರ್ಧರಿಸಿದ್ದೇವೆಂದು ದಸಂಸ ಮುಖಂಡ ಮರ್ಲೆ ಅಣ್ಣಯ್ಯ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾನೂನು ದಾಖಲೆಗಳಂತೆಯೇ ಉರುಸು ಆಚರಣೆ ನಡೆಯಬೇಕು; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ಬಡ ರೈತನ ಆರ್ಥಿಕ ದಿವಾಳಿಗೆ ಕಾರಣರಾಗಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಡಳಿತ ಮಂಡಳಿ ಅಧಿಕಾರಿಗಳು, ನೊಂದವರಿಗೆ ಜೆ.ಸಿ.ಬಿ ಕೊಡುವರೆಗೂ ಅನಿರ್ಧಿಷ್ಟ ಅವಧಿ ಮುಷ್ಕರ ಮಾಡಿ, ನೊಂದವರಿಗೆ ನ್ಯಾಯ ಕೊಡಿಸಲು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಬೆಂಬಲವಾಗಿರಲು ತೀರ್ಮಾನಿಸಿದೆ ಎಂದಿದ್ದಾರೆ. ಈ ವೇಳೆ ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಶ್ರೀನಿವಾಸ್, ಕೃಷ್ಣಮೂರ್ತಿ, ಎದ್ದೇಳು ಕರ್ನಾಟಕ ಟಿ.ಎಲ್ ಗಣೇಶ್, ಮಂಜುನಾಥ್, ಬೋರಮ್ಮ, ನಿವೃತ್ತ ನೌಕರರ ಸಂಘದ ಮುಖಂಡರು, ಹಾಗೂ ಇನ್ನಿತರ ಉಪಸಿತರಿದ್ದರು.





