ಚಿಕ್ಕನಾಯಕನಹಳ್ಳಿ | ನುಡಿದಂತೆ ನಡೆದು ತೋರಿದ ಮಹಾ-ಪರಿನಿರ್ವಾಣ ; ಸಿ ಡಿ ಚಂದ್ರಶೇಖರ್

Date:

ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್’ರವರ 69’ನೇ ಪರಿನಿರ್ವಾಣ ದಿನವನ್ನು, ಚಿ ನಾ ಹಳ್ಳಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್’ರವರ ನೇತೃತ್ವದಲ್ಲಿ ಆಚರಿಸಲಾಯಿತು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿ ಡಿ ಚಂದ್ರಶೇಖರ್, ದೇಶದ ದೀನ-ದಲಿತರ ಏಳ್ಗೆಯಲ್ಲಿ ಯುಗ-ಪ್ರವರ್ತಕ ಚೈತನ್ಯವನ್ನು ಮೂಡಿಸಿದ ಡಾ ಅಂಬೇಡ್ಕರ್’ರವರು ದೇಶಕಂಡ ಮಹಾನ್ ಚೇತನ. ಅಂಥ ಚೇತನ ಮಹಾ-ಪರಿನಿರ್ವಾಣವಾಗಿ ಈಗ್ಗೆ 69 ವರ್ಷಗಳು ಸಂದಿವೆ. ಇಂಥ ಮಹಾನ್ ಪುರುಷರು ನಮಗೆ ನೀಡಿಹೋದ ಅತ್ಯಮೂಲ್ಯ ಸಂವಿಧಾನ ಎಂದೆಂದೂ ನಮ್ಮ ಪಾಲಿನ ‘ಸತ್ಯಮೇವ ಜಯತೇ’ಯಾಗಿ ನಮ್ಮನ್ನು ಸದಾ ರಕ್ಷಿಸುತ್ತಿದೆ. ಇದನ್ನು ನಾವು ಜೋಪಾನವಾಗಿ ಕಾಪಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೂ ದಾಟಿಸಬೇಕು. ಇಲ್ಲದಿದ್ದರೆ, ಮತ್ತದೇ ತಾರತಮ್ಯ ಮತ್ತು ಅಸಮಾನತೆಯಿಂದ ಕೂಡಿದ ಪುರೋಹಿತಶಾಹಿ ಶೋಷಣೆಗೆ ಮತ್ತೆ ನಾವೇ ಹೋಗಿ ಕೊರಳೊಡ್ಡಿದಂತಾಗುತ್ತದೆ. ಈ ಎಚ್ಚರ ನಮ್ಮ ಯುವಕರೆಲ್ಲರಿಗೂ ಬರಲಿ ಎಂದು ಅವರು ಯುವಜನಾಂಗಕ್ಕೆ ಕರೆ ಕೊಟ್ಟರು.

1000744195

ತಾರತಮ್ಯ, ಅಸಮಾನತೆ, ಅಸಹಿಷ್ಣುತೆ, ಅವಮಾನ, ಮೇಲು-ಕೀಳು ಹಾಗೂ ಭಿನ್ನಬೇಧಗಳ ಮೂಲಕ ಶತಶತಮಾನಗಳ ಕಾಲ ದೀನ-ದಲಿತರನ್ನು ನಿರಂತರವಾಗಿ ಶೋಷಿಸಿಕೊಂಡು ಬರುತ್ತಿದ್ದ ಧರ್ಮದಲ್ಲಿ ನಾನು ಸಾಯಲು ಎಂದೂ ಇಷ್ಟಪಡುವುದಿಲ್ಲ…. ಎಂದು ವಚನ ನೀಡಿದ್ದ‌ ಬಾಬಾ ಸಾಹೇಬರು, ತಾವು ನುಡಿದಂತೆಯೇ ನಡೆದುಕೊಂಡು ಬುದ್ಧಗುರುವಿನಲ್ಲಿ ಮಹಾ-ಪರಿನಿರ್ವಾಣಗೊಂಡವರು. ಇದು ನುಡಿದಂತೆ ನಡೆದುಕೊಳ್ಳುವ ನಮ್ಮ ಆದಿಮ ಪರಂಪರೆಯ ದ್ಯೋತಕ ಎಂದು ಅವರು ಶ್ಲಾಘಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂವಿಧಾನ ಮತ್ತು ಬಾಬಾ ಸಾಹೇಬರ ಮಕ್ಕಳು ನಾವು :

ಸಂವಿಧಾನ ಬದಲಾಯಿಸುತ್ತೇವೆ ಎಂದು ಯಾರು ದಿನಾಬೆಳಗ್ಗೆದ್ದು ಹೇಳಿಕೆ ನೀಡುತ್ತಿದ್ದಾರೋ, ಅವರೆಲ್ಲರೂ ಇಂದು ಮಹಾರಾಷ್ಟ್ರದ ಮಣ್ಣ ಕಣಕಣದಲ್ಲೂ ಲೀನವಾಗಿರುವ ಚೈತ್ಯಭೂಮಿಯತ್ತ ಹೊರಳಿ ನೋಡಿ ತಲೆ-ತಗ್ಗಿಸುವಂತಾಗಿದೆ. ಸಂವಿಧಾನವನ್ನು ಬದಲಿ ಮಾಡಲು ಲಜ್ಜೆಗೆಟ್ಟು ಯತ್ನಿಸುತ್ತಿರುವವರಿಗೆ, ಸಂವಿಧಾನದಲ್ಲೇ ಅಡಕವಾಗಿರುವ ಅಗಾಧ ಶಕ್ತಿಚೈತನ್ಯದಿಂದಲೇ ನಿತ್ಯ ಸೋಲಾಗುತ್ತಿದೆ. ಇವೆಲ್ಲಕ್ಕೂ ಸಾಕ್ಷಿಯಾಗುತ್ತಿರುವ ನಮ್ಮಂಥ ಸಹಸ್ರಾರು ಮಂದಿ ‘ಸಂವಿಧಾನದ ಮಕ್ಕಳು’ ಸಂವಿಧಾನದ ಚೌಕಿದಾರಿಕೆಗೆ ಸದಾ ಕಟಿಬದ್ಧರಾಗಿ ನಿಂತಿದ್ದೇವೆ. ನುಡಿದಂತೆ ನಡೆದು ಮಹಾ-ಪರಿನಿರ್ವಾಣಗೊಂಡ ಬಾಬಾ ಸಾಹೇಬರ ಮಕ್ಕಳು ನಾವು ಎಂಬ ಹೆಮ್ಮೆಯಿದೆ ನಮಗೆ ಮತ್ತು ನಾವದನ್ನು ಸಾರ್ಥಕಗೊಳಿಸಿಯೇ ತೀರುತ್ತೇವೆ ಎಂದು ಬೇವಿನಹಳ್ಳಿ ಚನ್ನಬಸವಯ್ಯರು ಹೇಳಿದರು.

1000744197

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕಪ್ಪ, ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಗೋವಿಂದರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಮೀನುಗಾರ ಕೋಶದ ಅಧ್ಯಕ್ಷ ರಂಗನಾಥ್, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಯ ಸಿ.ಜಿ.ಚಂದ್ರಶೇಖರ್,  ಕೆಂಪಮ್ಮ, ಓಬಿಸಿ ಘಟಕದ ಅಧ್ಯಕ್ಷ ಗೋಡೆಕೆರೆ ಸುರೇಶ್ ಮತ್ತು ಲಿಂಗದೇವರು, ರಾಷ್ಟ್ರೀಯ ಸೇವಾದಳದ ಪ್ರಸನ್ನಕುಮಾರ್, ಹೊನ್ನೇಬಾಗಿ ಜಾಫರ್, ಬೆನಕನಕಟ್ಟೆ ರಮೇಶ್, ಕಂಟ್ಲಗೆರೆ ರಂಗನಾಥ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ – ಸಂಚಲನ

ಚಿಕ್ಕನಾಯಕನ ಸೀಮೆಯಿಂದ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...