ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಯುವಕರು ನಡುರಸ್ತೆಯಲ್ಲೇ ಗಲಾಟೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಎನ್.ಎಂ.ಸಿ ವೃತ್ತದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಸಿಗ್ನಲ್‌ನಲ್ಲಿ ಎರಡು ಕಾರುಗಳು ಪರಸ್ಪರ ತಗುಲಿದ ಕಾರಣ ಯುವಕರ ನಡುವೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವು ಯುವಕರು ಒಂದು ಕಾರಿನಲ್ಲಿದ್ದವರ ಪರವಾಗಿ ನಿಂತಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡಾನೆ ದಾಳಿಗೆ ಕಾರ್ಮಿಕ ಸಾವು; ಸರ್ಕಾರ ವಿರುದ್ಧ ಮಲೆನಾಡಿಗರ ಆಕ್ರೋಶ
ಸಿಗ್ನಲ್ ಓಪನ್ ಆಗಿ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಸಹ, ಯುವಕರು ಗಲಾಟೆ ನಿಲ್ಲಿಸದೆ, ರಸ್ತೆಯಲ್ಲೇ ಜಗಳ ಮುಂದುವರಿಸಿದ್ದಾರೆ. ಈ ಕುರಿತು ವಾಹನ ಚಾಲಹಿಸುವವರಿಗೆ ತೊಂದರೆಯಾಗಿದೆ. ಸಾರ್ವಜನಿಕರು ಜಗಳ ಬಿಡಿಸಲು ಪ್ರಯತ್ನಿಸಿದರೂ ಏನು ಪ್ರಯೋಜನವಾಗದೆ ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಯುವಕರನ್ನು ಅಲ್ಲಿಂದ ಕಳುಹಿಸಿ ಸಂಚಾರ ಸುಗಮಗೊಳಿಸಲಾಗಿದೆ.





