ಚಿಕ್ಕಮಗಳೂರು ಜಿಲ್ಲೆಯ ಹಜ್ರತ್ ದಾದಾ ಹಯಾತ್ ಮೀರ್ ಖಲಂದರ್ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಚಿಲ್ಲಾ ಗುಹೆ ದ್ವಾರದಲ್ಲಿರುವ ಕಲಿಮಾ ತಯ್ಯಿಬಾದ ಶಾಂತಿಪೂರ್ಣ ಜಿಯಾರತ್ ಕಾರ್ಯಕ್ರಮವನ್ನು ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಹಾಗೂ ಕಾನೂನು ಮತ್ತು ಆಡಳಿತಕ್ಕೆ ಸಂಪೂರ್ಣ ಗೌರವ ನೀಡುತ್ತಾ ಶುಕ್ರವಾರ, 23 ಜನವರಿ 2026 ರಂದು ನಡೆಸಲಾಯಿತು.
ಬೆಳ್ಳಿ ಚಿಲ್ಲಾ ಬಾಗಿಲಿನಲ್ಲಿರುವ ಕಲಿಮಾ ತಯ್ಯಿಬಾದ ಜಿಯಾರತ್ ಶಾಂತಿಯಾಗಿ ಪೂರ್ಣಗೊಂಡಿತು. ಅದೇ ವೇಳೆ, ಗುಹೆ ಪ್ರವೇಶದ ಮೆಟ್ಟಿಲುಗಳ ಮೇಲ್ಭಾಗದಲ್ಲಿರುವ ಮತ್ತೊಂದು ಕಲಿಮಾ ತಯ್ಯಿಬಾ ಲಿಪಿ ಮಣ್ಣಿನಿಂದ ಮುಚ್ಚಲ್ಪಟ್ಟಿರುವುದು ಗಮನಕ್ಕೆ ಬಂತು. ಈ ವಿಷಯವನ್ನು ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಅಧಿಕೃತವಾಗಿ ತರಲಾಗಿದೆ ಎಂದು ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕೇಂದ್ರ,ರಾಜ್ಯ ಅರಣ್ಯ ಕಾಯ್ದೆ: ರೈತ, ಕಾರ್ಮಿಕರಿಗೆ ಸಂಕಷ್ಟ; ಮಲೆನಾಡು ರೈತ, ಕಾರ್ಮಿಕ ಹಿತರಕ್ಷಣಾ ಸಮಿತಿ
ಈ ಜಿಯಾರತ್ ಕಾರ್ಯಕ್ರಮದಲ್ಲಿ ಬಾಬಾ ಬುಡನ್ ವಂಶಸ್ಥರಾದ ಸೈಯದ್ ಇಕ್ಬಾಲ್ ಪಾಶಾ ಖಾದ್ರಿ, ಸೈಯದ್ ಫಕ್ರುದ್ದೀನ್ ಶಾ ಖಾದ್ರಿ, ಸೈಯದ್ ಜುನೈದ್ ಪಾಶಾ ಖಾದ್ರಿ ಹಾಗೂ ಸೈಯದ್ ಸಕ್ಲೈನ್ ಪಾಶಾ ಖಾದ್ರಿ (ತೌಖೀರ್) ಭಾಗವಹಿಸಿದ್ದರು. ಬಾಬಾ ಬುಡನ್ ದರ್ಗಾ ಹೆರಿಟೇಜ್ ಅಸೋಸಿಯೇಷನ್ ಸದಸ್ಯರಾದ ಜುನೈದ್ ಪಾಶಾ, ಜಮೀಲ್ ಖಾನ್, ಸಮೀರ್, ತನ್ವೀರ್ ಅಹ್ಮದ್, ಮಕ್ಸೂದ್ ರಜ್ವಿ ಹಾಗೂ ತೌಸೀಫ್ ಅವರುಗಳು ಉಪಸ್ಥಿತರಿದ್ದರು. ಜೊತೆಗೆ ಚಿಕ್ಕಮಗಳೂರು ನಗರದ ಮುಬಾರಕ್, ಅಜ್ನಾನ್, ಜೀಲಾನ್, ಘೌಸ್ ಮುನೀರ್ ಸೇರಿದಂತೆ ಅನೇಕ ನಾಯಕರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





