ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ರಬ್ಬರ್ ಅಂಗಡಿಯಲ್ಲಿ 2.50 ಲಕ್ಷ ರೂಪಾಯಿ ಕಳವು ಮಾಡಿದ್ದ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ವ್ಯಕ್ತಿಗಳು ಹಾಸನ ಜಿಲ್ಲೆ ಬೇಲೂರಿನ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಶಹಬಾದ್, ಪೈಂಟ್ ಕೆಲಸ ಮಾಡುವ ಜೆಮ್‌ಶಿದ್, ಇಬ್ಬರು ಮೂಡಿಗೆರೆ ತಾಲೂಕಿನ ಮೂಲದವರು. ನ.19ರಂದು ಮಧ್ಯಾಹ್ನ ಹಳೇ ಪೇಟೆ ರಬ್ಬರ್ ಅಂಗಡಿ ವ್ಯಾಪಾರಿ ಟಿನು ಥೋಮಸ್ ಎಂಬುವರ ವ್ಯಾಪಾರದ ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ಪರೀಶಿಲನೆ ನಡೆಸಿ ಬೇಲೂರಿನಲ್ಲಿ ಕಳ್ಳತನ ಮಾಡಿದ್ದ, ಆರೋಪಿಗಳನ್ನು ಬಂಧಿಸಿ, 1.20 ಲಕ್ಷ ರೂಪಾಯಿ ಹಾಗೂ ಅಪರಾಧಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರೋಟರಿ ಜಿಲ್ಲಾ ಮಟ್ಟದ ಶೃಂಗ ವೈಭವ ಸಾಂಸ್ಕೃತಿಕ ಕಾರ್ಯಕ್ರಮ
ಈ ಘಟನಾ ಕುರಿತು ಕಾರ್ಯಾಚರಣೆ ವೇಳೆ ಎಸ್.ಐ ನಿರಂಜನಗೌಡ, ಅಪರಾಧ ವಿಭಾಗದ ಎಸ್‌ಐ ಜ್ಯೋತಿ ನೇತೃತ್ವದಲ್ಲಿ ಸಿಬ್ಬಂದಿ ಮಧು, ಯುಗಾಂಧರ, ಪರಮೇಶ್, ಬಿನು, ಅಮಿತ್ ಚೌಗಲೆ, ದೇವರಾಜ, ರೇವಗೊಂಡ ಬಿರಾದಾರ, ಕೌಶಿಕ್, ಸ್ವರೂಪ್, ನಯಾಜ್ ಅಂಜುಂ ಹಾಗೂ ರಬ್ಬಾನಿ ಹಾಗೂ ಇನ್ನಿತರರಿದ್ದರು.





