ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಬ್ರೇಕ್ ಫೇಲ್ಯೂರ್ ಆಗಿ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಈ ಘಟನೆಯಿಂದ ಪಲ್ಟಿಯಾದಂತಹ ಲಾರಿ, ಗೊಬ್ಬರ ತುಂಬಿಕೊಂಡು ಪಡುಬಿದರೆಯಿಂದ ಕೊಪ್ಪದ ಗಡಿಕಲ್ ಗೆ ಹೋಗುತ್ತಿದ್ದ ವೇಳೆ ಹರಿಹರಪುರ ಸರ್ಕಲ್ ಮಾರ್ಗವಾಗಿ ತೆರಳುವಾಗ ಬ್ರೇಕ್ ಫೇಲ್ಯೂರ್ ಆಗಿ ಪಲ್ಟಿಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಗಮಕ ಸಾಹಿತ್ಯ ಸಮ್ಮೇಳನ ಕಡೂರಿನಲ್ಲಿ ಆಯೋಜಿಸಲು ಚಿಂತನೆ
ಲಾರಿ ಪಲ್ಟಿ ಹೊಡೆಯುವ ಸಮಯದಲ್ಲಿ ಸ್ಕೂಟಿ ಮೇಲೆ ಬಿದ್ದಿದ್ದರಿಂದ ಸ್ಕೂಟಿ ಜಾಖಂಗೊಂಡಿದೆ. ಸಂಪೂರ್ಣ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಘಟನೆ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





