ಕಾಲೇಜಿನ ಆವರಣದಲ್ಲಿದ್ದ ಜೇನು ಗೂಡುಗಳನ್ನು ತೆರವುಗೊಳಿಸುವ ಭರದಲ್ಲಿ ಸಾವಿರಾರು ಜೇನು ಹುಳುಗಳು ಸತ್ತಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ಗುರುವಾರ ನಡೆದಿದೆ.
ನಗರದ ಹೊರವಲಯದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಜೇನು ಗೂಡು ಕಟ್ಟಿತ್ತು. ತೊಂದರೆ ನೀಡುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯು ಗೂಡುಗಳನ್ನು ತೆರವುಗೊಳಿಸಲು ಮುಂದಾಗಿದೆ.
ಗೂಡುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಿಯಮಾನುಸಾರ ಹೊಗೆ ಹಾಕಿ ಸ್ಥಳಾಂತರಿಸುವ ಬದಲು, ರಾಸಾಯನಿಕ ಸ್ಪೇ ಬಳಸಿ ತೆರವುಗೊಳಿಸಿರುವುದರಿಂದ ಸಾವಿರಾರು ಜೇನು ಹುಳುಗಳು ಸಾವನಪ್ಪಿವೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಣ್ಣ ಕೈಗಾರಿಕೆ ಸ್ಥಾಪನೆ; ಉದ್ಯೋಗ ವೃದ್ಧಿ, ಆರ್ಥಿಕ ಅಭಿವೃದ್ಧಿ ಹೆಚ್ಚಳ
ಪರಿಸರ ಸ್ನೇಹಿಯಾಗಿರಬೇಕಾದ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಜೇನು ಹುಳುಗಳ ಪ್ರಾಣ ತೆಗೆದಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಸಾಯನಿಕ ಸಿಂಪಡಿಸಿ ಈ ಕೃತ್ಯ ನಡೆಸಿರುವುದು ಅಮಾನವೀಯ ಘಟನೆಯಾಗಿದೆ.





