ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕುಸುಬೂರು ಗ್ರಾಮದ ವ್ಯಾಪ್ತಿಯಲ್ಲಿ ಚುಕ್ಕಿ ಜಿಂಕೆ ಬೇಟೆಯಾಡಿರುವ ಘಟನೆ ನಡೆದಿದೆ.
ಕುಸುಬೂರು ಗ್ರಾಮದ ದೊಡ್ಡಿನತಲೆ ನಿವಾಸಿಗಳಾದ ಎಸ್ ಎನ್ ಲೋಕೇಶ್ ಹಾಗೂ ಚಿನ್ನಯ್ಯ ಇಬ್ಬರು ಈ ಆರೋಪದಲ್ಲಿ ಬಂಧಿತರಾಗಿದ್ದಾರೆ. ಆರಂಬಳ್ಳಿ ಮೀಸಲು ಅರಣ್ಯದ ಸರ್ವೆ ನಂ. 48ರಲ್ಲಿ ಚುಕ್ಕಿ ಜಿಂಕೆ ಬೇಟೆ ಮಾಡಿ,
ಸೋಮವಾರ ಎಸ್ ಎನ್ ಲೋಕೇಶ್ ಮನೆಯಲ್ಲಿ ಮಾಂಸ ಬೇಯಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಮದ್ಯ ಸಾಗಾಟ: ವಶ ಪಡಿಸಿಕೊಂಡ ಅಧಿಕಾರಿಗಳು
ನರಸಿಂಹರಾಜಪುರ ತಾಲೂಕಿನ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ.





