ಸರ್ವೆಗೆ ಹೋದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ನಾಯಿ ದಾಳಿಗೆ ಒಳಗಾದ ಶಿಕ್ಷಕ ಕೃಷ್ಣಪ್ಪ (54), ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸರ್ವೆ ಹಿನ್ನೆಲೆ ಶಿಕ್ಷಕ ಕೃಷ್ಣಪ್ಪ ಅವರು ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮಕ್ಕೆ ಸರ್ವೆಗೆ ಹೋದ ವೇಳೆ ಘಟನೆ ನಡೆದಿದೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಶ್ರೀಗಂಧ ಸಾಗಾಟ ಆರೋಪ; ಪತ್ರಕರ್ತ ಸೇರಿ ಇಬ್ಬರ ಬಂಧನ
ಕೃಷ್ಣಪ್ಪ ಅವರ ಕಾಲಿನ ಭಾಗಕ್ಕೆ ಬೀದಿ ನಾಯಿ ಕಚ್ಚಿದ್ದು, ಸುಮಾರು 1 ಇಂಚು ಆಳಕ್ಕೆ ನಾಯಿ ಹಲ್ಲು ನಾಟಿದೆ ಎನ್ನಲಾಗಿದೆ. ಗಾಯಾಳು ಕೃಷ್ಣಪ್ಪ ಅವರಿಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಮನೆಗಳಲ್ಲಿ U.H.I.D. ನಂಬರ್ ಪಂಡಿಂಗ್ ತೋರಿಸುತ್ತಿದ್ದು, ಮೀಟರ್ ಬೋರ್ಡಿನ ಆರ್.ಆರ್. ನಂಬರ್ ತರಲು ಹೋದಾಗ ದಾಳಿ ನಡೆದಿದೆ.





