ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕುಪ್ಪಾಳು ವಲಯದ ಸ.ನಂ 90/2ರ ವಲಯದಲ್ಲಿ ಚಿರತೆಯು ಸಾವಿಗೀಡಾಗಿದೆ.
ಮೃತ ಪಟ್ಟ ಚಿರತೆ ಸುಮಾರು 8ರಿಂದ 10ರ ವಯೋಮಾನದ ಚಿರತೆಯು ಮತ್ತೊಂದು ಚಿರತೆಯ ಜತೆ ಕಾದಾಟದ ವೇಳೆ ಗಾಯಗೊಂಡು ಸಾವಿಗೀಡಾಗಿದೆ. ಹಾಗೆಯೇ, ಚಿರತೆಯ ಬೆನ್ನು, ಮುಖದ ಮೇಲೆ ಗಾಯ ಮತ್ತು ಹಲ್ಲಿನ ಗುರುತುಗಳು ಮೂಡಿದ್ದು ಸೋಂಕಿನಿಂದ ಬಳಲಿತ್ತು ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ‘ವಿಷ ಪಾಷಾಣ’ ಬೆರಕೆ; 8 ಸಾಕು ನಾಯಿಗಳು ಸಾವು
ಈ ಸಂದರ್ಭದಲ್ಲಿ ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕ ತೆರಳುವ ವೇಳೆಗೆ ಮೃತಪಟ್ಟಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಡೂರು ಜೆಎಂಎಫ್‌ಸಿ ನ್ಯಾಯಾಧೀಶರ ಅನುಮತಿ ಪಡೆದು ಚಿರತೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ, ತಾಲ್ಲೂಕಿನ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಸುಟ್ಟು ಹಾಕಲಾಯಿತು ಎನ್ನಲಾಗಿದೆ. ಈ ವೇಳೆ ಎಸಿಎಫ್ ಮೋಹನ್ ನಾಯ್ಕ, ಆರ್‌ಎಫ್‌ಒ ಹರೀಶ್, ತಂಗಲಿ ಉಪವಲಯ ಅರಣ್ಯಾಧಿಕಾರಿ ವೆಂಕಪ್ಪ ಗೋವಣ್ಣನವರ ಉಪಸ್ಥಿತರಿದ್ದರೆನ್ನಾಲಾಗಿದೆ.





