ನಾಲ್ಕುವರೇ ವರ್ಷದ ಹೆಣ್ಣು ಮಗುವನ್ನು ಚಿರತೆ ತಿಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಮಗು ಸಾನ್ವಿ (4 ವರ್ಷದ 6 ತಿಂಗಳು), ಮೂಲತಹ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವರು. ಸಾವಿಗೀಡಾದ ಮಗುವಿನ ತಂದೆ ಬಸವರಾಜು ತರೀಕೆರೆ ತಾಲೂಕಿನ ಶಿವಪುರ ಗ್ರಾಮಕ್ಕೆ ಓರ್ವರ ತೋಟ ಕಾಯಲು ಕುಟುಂಬ ಸಮೇತ ವಾಸವಾಗಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಯಕ್ಷಗಾನ ಕಲಾವಿದ ಹೃದಯಘಾತದಿಂದ ಸಾವು
ಸಂಜೆ 5:30ರ ವೇಳೆ ಮಗು ಮನೆ ಅಂಗಳದ ಸಮೀಪದಲ್ಲಿ ಆಟವಾಡುತ್ತಿದ್ದಾಗ, ಚಿರತೆ ಪುಟ್ಟ ಮಗುವನ್ನು ಎಳೆದು ತಿಂದು ಹಾಕಿರುವ ಅಮಾನವೀಯ ಘಟನೆ ಸಂಭವಿಸಿದೆ. ಮಗು ಕಾಣಿಸದೆ ಇದ್ದಾಗ, ಮಗುವಿನ ತಾಯಿ ಸುತ್ತಮುತ್ತ ಹುಡುಕಿದಾಗ ಚಿರತೆ ತಿಂದು ಹೋಗುತ್ತಿರುವುದು ಪತ್ತೆಯಾಗಿದೆ. ಇದು ತರೀಕೆರೆ ತಾಲೂಕಿನಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.





