ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮದಲ್ಲಿ ಕಾಫಿ ಪಲ್ಟಿಂಗ್ ನೀರು ಹಳ್ಳಕ್ಕೆ ಸೇರಿ ಕಲುಷಿತಗೊಂಡಿರುವ ಪರಿಣಾಮ ನೂರಾರು ಮೀನು ಮರಿಗಳು ಸಾವನ್ನಪ್ಪಿದೆ.
ಈ ನೀರು ಯಗಚಿ ನದಿಯನ್ನು ಸೇರುವುದರಿಂದ, ದೊಡ್ಡ ಮಟ್ಟದ ಪರಿಸರ ಮಾಲಿನ್ಯದ ಅಪಾಯ ಎದುರಾಗಿದೆ.ಕಾಫಿ ತೋಟಗಳ ಮಾಲೀಕರು ಕಾಫಿ ಪಲ್ಟಿಂಗ್ ನೀರನ್ನು ನೇರವಾಗಿ ಹಳ್ಳಕ್ಕೆ ಬಿಡುತ್ತಿರುವುದೇ ಈ ಮಾಲಿನ್ಯಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಡಿಕೆ ತುಂಬಿದ ವಾಹನ ಪಲ್ಟಿ; ವ್ಯಕ್ತಿ ಸಾವು
ಪರಿಸರ ಮತ್ತು ಜಲಮೂಲಗಳಿಗೆ ಹಾನಿ ಮಾಡುತ್ತಿರುವವರನ್ನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.





