ಅಂಗಡಿಗೆ ನುಗ್ಗಿ 2.50 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಟೀನು ಎಂಬುವರಿಗೆ ಸೇರಿದ್ದ ರಬ್ಬರ್ ಶೀಟ್, ಮಾಲೀಕರು ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಂಗಡಿಯ ಒಳಗೆ ಪ್ರವೇಶಿಸಿ ಯಾರಿಗೂ ಅನುಮಾನ ಬಾರದಂತೆ ಹಣವಿದ್ದ ಟೇಬಲ್ ನಲ್ಲಿ 2.50 ಲಕ್ಷ ರೂ. ದೋಚಿ ಪರಾರಿಯಾಗಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮೃತ ವ್ಯಕ್ತಿಯನ್ನು ಕೊಂಡೋಯ್ಯಲು ಹರಸಾಹಸ ಪಡಬೇಕಾಯಿತು; ಸಂಕ್ಲಾಪುರ ಗ್ರಾಮಸ್ಥರು
ಈ ಘಟನೆ ಕುರಿತು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





