ಮಾಜಿ ಪ್ರೇಯಸಿಗೆ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದಕ್ಕೆ ಯುವಕನೋರ್ವನಿಗೆ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದಿದೆ.
ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಮೃತ ಯುವಕ. ಹತ್ಯೆಗೈದ ಕಿರಣ್, ವೇಣು, ಅಪ್ಪು ಮತ್ತು ಮನು ಅತ್ತಿಗನಾಲು ಗ್ರಾಮದವರು. ಆರೋಪಿ ಕಿರಣ್ ನ ಸಹೋದರಿಗೆ ಇನ್ ಸ್ಟಾಗ್ರಾಮ್ ನಲ್ಲಿ ಮಂಜುನಾಥ್ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದನು. ಇದರಿಂದ ರೊಚ್ಚಿಗೆದ್ದ ಕಿರಣ್, ವೇಣು, ಅಪ್ಪು ಮತ್ತು ಮನು ಸೇರಿ ಬುಧವಾರ ಸಂಜೆ ವೇಳೆ ಅತ್ತಿಗನಾಲು ಅಂಡರ್‌ಪಾಸ್‌ನಲ್ಲಿ ಮಾತನಾಡಬೇಕಿದೆ ಎಂದು ಮಂಜುನಾಥ್ ನನ್ನು ಕಿರಣ್ ಕರೆಸಿಕೊಂಡಿದ್ದಾನೆ. ತನ್ನ ಸಹೋದರಿಗೆ ಸಂದೇಶ ಕಳುಹಿಸಿದ ಬಗ್ಗೆ ಕಿರಣ್, ಮಂಜುನಾಥ್ ನನ್ನು ಪ್ರಶ್ನಿಸಿ, ಜಗಳ ನಡೆದ ಪರಿಣಾಮ ಮಂಜುನಾಥ್ ಗೆ ಚಾಕುವಿನಿಂದ ಹತ್ಯೆ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ
ಮಗಳ ಪ್ರೀತಿ ವಿಚಾರ ತಿಳಿದು ಪೋಷಕರು ಬೇರೊಬ್ಬನೊಂದಿಗೆ ವಿವಾಹ ನಿಶ್ಚಯ ಮಾಡಿಸಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





