ಮಲೆನಾಡಿನಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಇಬ್ಬರು ಆನೆ ತುಳಿತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲೂಕು ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಆನೆ ದಾಳಿಯಿಂದ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳು ಉಮೇಶ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಎಂಬಾತರು, ದನ ಕಟ್ಟುವ ಕೊಟ್ಟಿಗೆಗೆ ಸೊಪ್ಪು ತರಲು ತೆರಳಿದ್ದಾಗ ಏಕಏಕಿಯಾಗಿ ಆನೆ ದಾಳಿ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಚಿರತೆ ಸಾವನಪ್ಪಿರುವ ಸ್ಥಿತಿಯಲ್ಲಿ ಕಳೇಬರ ಪತ್ತೆ
ಸತತವಾಗಿ ಆನೆ ದಾಳಿಯಿಂದ ಜನರು ಸಾವನ್ನಪ್ಪುತ್ತಿರುವುದರಿಂದ ಅರಣ್ಯ ಇಲಾಖೆ ಹಾಗೂ ಅರಣ್ಯ ಸಚಿವರ ವಿರುದ್ಧ ಸ್ಥಳೀಯ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





