ಸಿಡಿಲು ಬಡಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಗುಮ್ಮಿನಕಾನು ತೋಟದಲ್ಲಿ ನಡೆದಿದೆ.
ಮೃತ ಕಾರ್ಮಿಕ ಅಸ್ಸಾಂ ಮೂಲದ ಮೌರುದ್ಧಿನ್(16), ಸ್ಥಳೀಯರ ಮಾಹಿತಿಯ ಪ್ರಕಾರ ಮೌರುದ್ದಿನ್ ಮತ್ತು ಮತ್ತೊಬ್ಬ ಯುವಕ ಇಬ್ಬರೂ ತೋಟದ ಕೂಲಿ ಲೈನಿನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ ಮಲಗಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಮಳೆ ಹಾಗೂ ಮಿಂಚು ನಡುವೆ ಸಿಡಿಲು ಬಡಿದಿದ್ದು, ಅದರಿಂದ ಮೌರುದ್ದಿನ್ ತೀವ್ರ ಆಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮನೆ ಬಾಗಿಲಿಗೆ ಚರಂಡಿ, ಶೌಚ ನೀರು; ಅಧಿಕಾರಿಗಳ ನಿರ್ಲಕ್ಷ್ಯವೆಂದ ಸ್ಥಳೀಯರು
ಈ ವೇಳೆ ಸ್ಥಳೀಯರು ಹಾಗೂ ಹಿರೇಬೈಲಿನ ಸಾಮಾಜಿಕ ಕಾರ್ಯಕರ್ತ ಶರೀಫ್ ಅವರ ನೆರವಿನಿಂದ ಯುವಕನನ್ನು ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯುವಾಗ ದಾರಿ ಮಾರ್ಗದಲ್ಲೇ ಸಾವನ್ನಪ್ಪಿದ್ದಾರೆ.





