ಚಿಕ್ಕಮಗಳೂರು ನಗರದ ಎಸ್ ಬಿಎಮ್ ಆಟೋ ವೃತ್ತದ ಶ್ರೀರಾಮ ಆಟೋ ನಿಲ್ದಾಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಜೊತೆಗೆ ನೂತನವಾಗಿ ನಾಮ ಪಾಲಕ ಅಳವಡಿಸುವ ಮೂಲಕ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಉಮೇಶ್ ಅವರು ಟಿ ಎಮ್ ಎಸ್ ಶಾಲೆ ಮುಖ್ಯೋಪಾಧ್ಯಾಯರು ನಟರಾಜ್ ಮತ್ತು ಜಗದೀಶ್ ಕೋಟೆ ಮತ್ತು ಶ್ರೀ ರಾಮ ಆಟೋ ನಿಲ್ದಾಣದ ಆಟೋ ಚಾಲಕರು ಮತ್ತು ಮಾಲೀಕರು ಸೇರಿ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ಅರ್ಚನೆ ಮಾಡಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು ಎಂದು ಆಟೋ ಚಾಲಕ ಸಂಘದ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಲಿಮಾ ತಯ್ಯಿಬಾ ಜಿಯಾರತ್ ಕಾರ್ಯಕ್ರಮ
ಈ ಕಾರ್ಯಕ್ರಮದಲ್ಲಿ ರಂಗನಾಥ ಚಿಕ್ಕನಹಳ್ಳಿ, ರಮೇಶ ಸಿರಗಪುರ ಮತ್ತು ರಮೇಶ, ನರಸಿಂಹ ಬಾಬು,ರಘು ಕೋಟೆ,ಪ್ರದೀಪ್, ಸುರೇಶ, ಶಾಂತಕುಮಾರ್,ಲಕ್ಷಣ, ರಾಮು, ಲೋಕೇಶ್ ಕೋಟೆ ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತಿಯಲ್ಲಿದ್ದರು.





