ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಕರ್ನಾಟಕದಲ್ಲಿ ರೈಲು ಸಂಪರ್ಕ ಜಾಲವನ್ನು ಭಾರತೀಯ ರೈಲ್ವೆ ಇಲಾಖೆಯು ವಿಸ್ತರಿಸಲು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಲೆನಾಡು ಭಾಗವನ್ನು ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳೊಂದಿಗೆ ಜೋಡಿಸುವ ಹೊಸ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಖ್ಯವಾಗಿ ಬೀರೂರು ಜಂಕ್ಷನ್‌ನಿಂದ ಶಿವಮೊಗ್ಗದವರೆಗಿನ ಸುಮಾರು 63 ಕಿಲೋ ಮೀಟರ್ ಉದ್ದದ ಹಳಿಯನ್ನು ದ್ವಿಪಥಗೊಳಿಸುವುದು (ಡಬ್ಲಿಂಗ್) ಈ ಯೋಜನೆಯ ಪ್ರಮುಖ ಆದ್ಯತೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗ್ರಾಹಕರ ವೇದಿಕೆ; ಮಧ್ಯಸ್ಥಿಕೆ ಕೇಂದ್ರದ ಹೊಸ ಕಟ್ಟಡ ಉದ್ಘಾಟನೆ
ಈ ಹಳಿಯನ್ನು ದ್ವಿಪಥಗೊಳಿಸುವುದರಿಂದ ರೈಲುಗಳ ಓಡಾಟ ಮತ್ತಷ್ಟು ಸುರಕ್ಷಿತವಾಗುವುದಲ್ಲದೆ, ಪ್ರಯಾಣದ ಅವಧಿಯೂ ಗಣನೀಯವಾಗಿ ಉಳಿತಾಯವಾಗಲಿದೆ. ಮಾರ್ಗದಲ್ಲಿ ಏಕ ಹಳಿ ವ್ಯವಸ್ಥೆ ಇರುವುದರಿಂದ ರೈಲುಗಳ ಸಂಚಾರದ ವೇಗ ಮತ್ತು ಸಮಯದ ನಿರ್ವಹಣೆಯಲ್ಲಿ ಸವಾಲುಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೂಡಲೇ ಡಬ್ಲಿಂಗ್ ಕಾಮಗಾರಿಯನ್ನು ಆರಂಭಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.





