ಕೊಪ್ಪ | ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಅನ್ಯಾಯ; ಅಮೃತ ಸಿಂಚನ ಟ್ರಸ್ಟ್ ವಿರುದ್ಧ ಪ್ರತಿಭಟನೆ

Date:

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಆರೂರು ಲಕ್ಷ್ಮೀನಾರಾಯಣರಾವ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಅಮೃತ ಸಿಂಚನ ಟ್ರಸ್ಟ್ ಅನ್ಯಾಯ ಎಸಗಿದ್ದು, ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, “ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣರಾವ್ ಹಿರಿಯ ಪ್ರಾಥಮಿಕ ಶಾಲೆಯನ್ನು ಅಮೃತ ಸಿಂಚನ ಟ್ರಸ್ಟ್‌ನವರು ದತ್ತು ತೆಗೆದುಕೊಂಡು ಕೇವಲ ಒಂದು ವರ್ಷವಾಗಿದೆ. ಶಾಲೆ ಪ್ರಾರಂಭವಾಗಿ ಕೆಲವೇ ತಿಂಗಳಾಗಿದೆ. ಶಾಲೆ ಅಭಿವೃದ್ಧಿಪಡಿಸುತ್ತೇವೆಂದು ಹೇಳಿ ಕೈಬಿಟ್ಟು ಹೋಗುತ್ತಿರುವುದು ಖಂಡನೀಯ. ಅಲ್ಲದೆ ಎಲ್ಲ ಶಿಕ್ಷಕ ವೃಂದ, ಎಸ್‌ಡಿಎಂಸಿ ಹಾಗೂ ಪೋಷಕರಿಗೆ ಅನ್ಯಾಯ ಎಸಗಿದಂತಾಗಿದೆ” ಎಂದು ಆರೋಪಿಸಿದರು.‌

“ಎಲ್‌ಕೆಜಿ ಹಾಗೂ ಯುಕೆಜಿಯ ಅಭಿವೃದ್ಧಿಗೆ ಬಂದ ಹಣವನ್ನು ಪಡೆದುಕೊಂಡು, ʼನಾವು ಅಭಿವೃದ್ಧಿ ಮಾಡಿದ್ದೇವೆ, ನಾವು ಅಭಿವೃದ್ಧಿ ಮಾಡಿದ್ದೇವೆʼ ಎಂದು ಹೇಳಿಕೊಂಡಿದ್ದಾರೆ. ಎರಡು ತಿಂಗಳಿಂದ ಎಲ್‌ಕೆಜಿ, ಯುಕೆಜಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ವೇತನ ನೀಡದೆ ನಮಗೂ ಈ ಶಾಲೆಗೂ ಯಾವುದೇ ಸಂಬಂಧವಿಲ್ಲವೆಂದು ಅರ್ಧಕ್ಕೆ ಕೈ ಬಿಟ್ಟು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಎರಡು ತಿಂಗಳ ಸಂಬಳವನ್ನು ನೀಡಿಲ್ಲವೆಂದು ಪ್ರಶ್ನಿಸಿದರೆ, ʼನಮಗೆ ಹಣ ಮೇಲಿನಿಂದ ಉದುರುವುದಿಲ್ಲʼವೆಂಬ ಉಡಾಫೆ ಉತ್ತರವನ್ನು ನೀಡಿ, ಟ್ರಸ್ಟ್‌ನವರು ಇನ್ನೊಂದು ಶಾಲೆ ಅಭಿವೃದ್ಧಿಪಡಿಸುವ ನೆಪವೊಡ್ಡಿ ಬೇರೊಂದು ಕಡೆಗೆ ಪಲಾಯನ ಮಾಡಿದ್ದಾರೆ” ಎಂದು ಸ್ಥಳೀಯರು ದೂರಿದ್ದಾರೆ.

“ಮೇಲಿನ ಪೇಟೆಯಲ್ಲಿ ಸ್ಥಳೀಯ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಈ ಶಾಲೆ ಹತ್ತಿರವಾಗುತ್ತದೆಂದು ತುಂಬಾ ಮಕ್ಕಳು ಶಾಲೆಗೆ ಬರುತ್ತಿದ್ದರು. ಮಕ್ಕಳು ಶಾಲೆಗೆ ಹೋಗದೇ ಇದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಂದು ಪೋಷಕರು ಆತಂಕದಲ್ಲಿದ್ದಾರೆ. ನಮ್ಮ ಶಾಲೆಗಾದ ಪರಿಸ್ಥಿತಿಯು ಬೇರೊಂದು ಶಾಲೆಗಾಗಬಾರದು. ತಪ್ಪು ಮಾಡಿದವರಿಗೆ ಕೂಡಲೇ ಶಿಕ್ಷೆಯಾಗಬೇಕು” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು| ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸದ ಅಧಿಕಾರಿ, ಸಿಬ್ಬಂದಿಗಳಿಗೆ ಲೋಕಾಯುಕ್ತದಿಂದ ಕಾನೂನು ಕ್ರಮ

“ಅಮೃತ ಸಿಂಚನ ಟ್ರಸ್ಟ್‌ನವರು ವಾಗ್ದಾನ ಮಾಡಿದಂತೆ ಹಾಗೂ ಶಾಲೆಯ ಮುಂಭಾಗ ಎಲ್ಲವೂ ಉಚಿತವೆಂದು ಬೋರ್ಡ್ ಹಾಕಿದಂತೆ ನಡೆದುಕೊಂಡಿಲ್ಲ. ಈಗಾಗಲೇ ಎಲ್‌ಕೆಜಿ, ಯುಕೆಜಿ ಶಿಕ್ಷಕರ ಹಾಗೂ ಶಾಲಾ ಸಹಾಯಕರಿಗೆ ಎರಡು ತಿಂಗಳ ವೇತನವನ್ನು ನೀಡಿರುವುದಿಲ್ಲ. ಕೂಡಲೇ ಶಿಕ್ಷಕರಿಗೆ ಈ ವರ್ಷದ ವೇತನವನ್ನು ನೀಡಬೇಕು. ನಮ್ಮ ಶಾಲೆಗೆ ಮಾಡಿದ ಅನ್ಯಾಯ ಇನ್ನಾವ ಶಾಲೆಗೂ ಆಗಕೂಡದು. ಹಾಗಾಗಿ ಶಿಕ್ಷಣಾಧಿಕಾರಿಗಳು ತಾಲೂಕಿನ ಯಾವ ಶಾಲೆಗೂ ಈ ಅಮೃತ ಸಿಂಚನ ಟ್ರಸ್ಟನ್ನು ಸೇರಿಸಿಕೊಳ್ಳಬಾರದು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಗ್ರಾಹಕರ ವೇದಿಕೆ; ಮಧ್ಯಸ್ಥಿಕೆ ಕೇಂದ್ರದ ಹೊಸ ಕಟ್ಟಡ ಉದ್ಘಾಟನೆ 

ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಯ ಮಧ್ಯಸ್ಥಿಕೆ ಕೇಂದ್ರದ ಹೊಸ ಕಟ್ಟಡವನ್ನು...

ಚಿಕ್ಕಮಗಳೂರು | ಉರುಸ್ ವಿವಾದ; ಹೋರಾಟಗಾರರನ್ನು ಬಂಧಿಸಿದ್ದನ್ನು ಖಂಡಿಸುತ್ತೇನೆ; ಟಿ.ಡಿ ರಾಜೇಗೌಡ

ಕಾಂಗ್ರೆಸ್ ಸರ್ಕಾರ ವಿರುದ್ಧ ಜಾತ್ಯತೀತ ತಿಲಾಂಜಲಿ ನೀಡುತ್ತಿದೆ ಎಂದು ಚಿಕ್ಕಮಗಳೂರು ನಗರದಲ್ಲಿ...

ಕಡೂರು | ಒಳಮೀಸಲಾತಿ ವರ್ಗೀಕರಣ; ಸದನದಲ್ಲಿ ಪ್ರಸ್ತಾಪಿಸಬೇಕು;ಮಾದಿಗ ಮೀಸಲಾತಿ ಹೋರಾಟ ಸಮಿತಿ 

ಮಾದಿಗ ಸಮಾಜದ ಒಳಮೀಸಲಾತಿ ವರ್ಗೀಕರಣ ಹುದ್ದೆ ಭರ್ತಿಯಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸದನದಲ್ಲಿ...

ಬಾಬಾ ಬುಡನ್‌ಗಿರಿ ʼಉರುಸ್‌ʼ ವಿವಾದ; ಸರ್ಕಾರದ ವಿರುದ್ಧ ಕಾವೇರಿದ ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬಾಬಾ ಬುಡನ್‌ಗಿರಿ....