ಚಾಮರಾಜನಗರದಲ್ಲಿ ₹50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ ಆರು ತಿಂಗಳ ಮಗುವಿನ ಪೋಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ, ರಕ್ಷಿಸಿದ್ದಾರೆ.
ನಗರ ವ್ಯಾಪ್ತಿಯ ರಾಮಸಮುದ್ರದ ಕುರುಬರ ಬೀದಿ ನಿವಾಸಿಗಳಾದ ಸಿಂಧು ಹಾಗು ಮಂಜುನಾಯಕ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಕೊಣನೂರಿನ ನೇತ್ರ ಹಾಗು ಜವರಯ್ಯ ಎಂಬುವರಿಗೆ ಮದ್ಯವರ್ತಿ ಶಾಂತ ಎಂಬುವರ ಮೂಲಕ ಹಸುಗೂಸನ್ನು ಮಾರಾಟ ಮಾಡಿದ್ದರು.
ಈ ಸಂಬಂಧ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದ್ದು, ಆರೋಗ್ಯವಾಗಿದೆ ಎಂದು ತಿಳಿದುಬಂದಿರುತ್ತದೆ.
ಈ ವಿಡಿಯೋ ವೀಕ್ಷಿಸಿ:https://youtu.be/yue3D6jXHgI?si=0hfXbtYRTM1bGbLC
ಹೆಚ್ಚುವರಿ ಎಸ್ಪಿ ಎಂ.ಎನ್. ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಎಂ. ಜಗದೀಶ್, ಪಿಎಸ್ಐ ಆರ್. ಮಂಜುನಾಥ್ ಅವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮುತ್ತುರಾಜ್ ಪ್ರಶಂಸಿಸಿ, ಬಹುಮಾನ ಘೋಷಿಸಿದ್ದಾರೆ.





