ಚಿಂತಾಮಣಿ ತಾಲ್ಲೂಕಿನ ತಾಲೂಕು ಕಾನೂನು ಸೇವಾ ಸಮಿತಿ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸುಮಾರು ಜನವರಿ ತಿಂಗಳಿನಲ್ಲಿ ಒಂದು ತಿಂಗಳುಗಳ ಕಾಲ ಚಿಂತಾಮಣಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಗೊಂಡ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಯಿಂದ ಚಿಂತಾಮಣಿ ಏ ಆರ್ ಟಿ ಓ ಕಚೇರಿಗೆ ಅತ್ಯುತ್ತಮ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಪ್ರಶಸ್ತಿ ನೀಡಲಾಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಚಿಂತಾಮಣಿ ಏ ಆರ್ ಟಿ ಓ ಕಚೇರಿಯ ಬೈರಾರೆಡ್ಡಿ ಕಚೇರಿಯ ಅಧೀಕ್ಷಕರಾದ ಸಿ ದೇವರಾಜ್ ಹಾಗೂ ಸಿಬ್ಬಂದಿ ವರ್ಗದವರಿಗೆ ನೀಡಲಾಯಿತು.
ಇದನ್ನು ಓದಿದ್ದೀರಾ..? ಪ್ರಧಾನಿ ಮೋದಿ ಹೆಸರು ಎಫ್ಸ್ ಟೀನ್ ಫೈಲ್‌ನಲ್ಲಿ ಉಲ್ಲೇಖ ಯುವ ಕಾಂಗ್ರೆಸ್ ಪ್ರತಿಭಟನೆ
ಇನ್ನು ಈ ವೇಳೆ ಮಾತನಾಡಿದ ಕಚೇರಿಯ ಮೋಟರ್ ವಾಹನ ನಿರೀಕ್ಷಕರಾದ ನರಸೇಗೌಡ ಎಲ್ಲರ ಸಹಕಾರದೊಂದಿಗೆ ಒಂದು ತಿಂಗಳುಗಳ ಕಾಲ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮಗಳು ತುಂಬಾ ಅದ್ಭುತವಾಗಿ ಹಾಗೂ ಯಶಸ್ವಿಯಾಗಿ ನಡೆದಿದೆ.ಪ್ರತಿಯೊಬ್ಬರು ಎಂದಿಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.





