ಚಿಂತಾಮಣಿ | ನಿಮಿಷಾ ಪ್ರಿಯಾ ಪ್ರಕರಣ: ತಲಾಲ್ ಕುಟುಂಬದೊಂದಿಗೆ ಡಾ. ಸಿ ಕೆ ಮೌಲಾ ಶರೀಫ್ ಮಾತುಕತೆ

Date:

ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಎಂಬ ಮಹಿಳೆಯ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಗ್ರಾಮದ ವಕೀಲ ಡಾ. ಸಿ ಕೆ ಮೌಲಾ ಶರೀಫ್ ಅವರು ತಲಾಲ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿ, ಕುಟುಂಬದವರ ಮನ ಗೆದ್ದು ಬಂದಿದ್ದಾರೆ.

2008ರಲ್ಲಿ ಯೆಮೆನ್‌ಗೆ ತೆರಳಿ ನರ್ಸ್‌ ಕೆಲಸಕ್ಕೆ ಸೇರಿದ್ದ ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಎಂಬ ಮಹಿಳೆ ಯೆಮೆನ್ ನಿವಾಸಿ ತಲಾಲ್ ಹತ್ಯೆಯ ಆರೋಪಿಯಾಗುತ್ತಾಳೆ. 2017ರಲ್ಲಿ ಆರೋಪ ಸಾಬೀತಾಗಿ 2018ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಈ ನಡುವೆ ನಿಮಿಷ ಪ್ರಿಯಾ ಕುಟುಂಬ ಗ್ರಾಂಡ್ ಮುಫ್ತಿ ಶೇಕ್ ಅಬುಬಕರ್ ಮುಸ್ಲಿಯರ್ ಅವರ ಮಧ್ಯಸ್ಥಿಕೆ ಬಯಸಿತ್ತು. ಅಬುಬಕರ್ ಅವರ ಭಾಗಿದಾರಿಕೆ ತಲಾಲ್ ಕುಟುಂಬದೊಂದಿಗೆ ಮಧ್ಯಸ್ಥಿಕೆಗೆ ಅನುಕೂಲದ ವಾತಾವರಣ ನಿರ್ಮಿಸಿ, ಇದೀಗ ದೇಶವೇ ಅತ್ಯಂತ ಕುತೂಹಲದಿಂದ ನೋಡುತ್ತಿದ್ದ ಫಲಿತಾಂಶ ನಮ್ಮ ಕಣ್ಣಮುಂದೆ ಬಂದುನಿಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿಮಿಷಾ ಪ್ರಿಯಾಳ ಗಲ್ಲು ಶಿಕ್ಷೆ ರದ್ದುಗೊಂಡಿದೆ. ಬ್ಲಡ್ ಮನಿ ಮಾತುಕತೆ ನಡೆದು ಕ್ಷಮಾಪಣೆಗೆ ಕುಟುಂಬ ಸಜ್ಜಾಗಿದೆ ಎಂಬ ವರದಿಗಳು ಕೇಳಿಬಂದಿವೆ.

ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಗ್ರಾಮದ ವಕೀಲ ಡಾ. ಸಿ ಕೆ ಮೌಲಾ ಶರೀಫ್ ಅವರೂ ಕೂಡ ಯೆಮನ್ ದೇಶಕ್ಕೆ ಭೇಟಿ ನೀಡಿ ತಲಾಲ್‌ ಕುಟುಂಬದೊಂದಿಗೆ ಸುದೀರ್ಘಕಾಲ ಚರ್ಚೆ ನಡೆಸಿ ಅವರ ಮನ ಗೆದ್ದು ವಾಪಸ್ ಬಂದಿದ್ದಾರೆ.‌

ಈ ಸುದ್ದಿ ಓದಿದ್ದೀರಾ? ಮಂಗಳೂರು | ಸಾಲದ ಆಮಿಷವೊಡ್ಡಿ 200 ಕೋಟಿ ರೂ. ವಂಚನೆ ಆರೋಪ: ರೋಹನ್ ಸಲ್ಡಾನಾ ಬಂಧನ

ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿ ಕೆ ಮೌಲಾ ಶರೀಫ್, “ಭಾರತ ದೇಶದ ಮೂಲೆ ಮೂಲೆಯಿಂದ ಹಲವಾರು ಭಾರತೀಯರು ನರ್ಸ್ ಕೆಲಸ ಸೇರಿದಂತೆ ವಿವಿಧ ರೀತಿಯ ಕೆಲಸಗಳಿಗಾಗಿ ಹೊರದೇಶಗಳಿಗೆ ಹೋಗುತ್ತಾರೆ. ಆದರೆ ಭಾರತೀಯರು ಎಲ್ಲರೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳುವವರು. ಭಾರತೀಯರು ಒಂದು ಇರುವೆಗೂ ನೋವುಂಟು ಮಾಡುವವರಲ್ಲ. ಅಂತಹವರು ಒಬ್ಬ ಮನುಷ್ಯನನ್ನು ಹೇಗೆ ಕೊಲೆ ಮಾಡುತ್ತಾರೆಂದು ಹೇಳಿದ, ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರೊಂದಿಗೂ ದೂರವಾಣಿ ಮುಖಾಂತರ ಮಾತುಕತೆ ನಡೆಸಿ, ತಲಾಲ್ ಅವರ ಕುಟುಂಬದವರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಇಡೀ ವಿಶ್ವದ ಫೇಮಸ್ 10 ಕುಟುಂಬಗಳ ನೇತೃತ್ದಲ್ಲಿ ತಲಾಲ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ” ಎಂದು ವಿವರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...