ಚಿತ್ರದುರ್ಗ | ಶಾಸಕರಿಗೆ ವೇತನ ಹೆಚ್ಚಳ ಕಾಯ್ದೆ, ತಿರಸ್ಕರಿಸಲು ರೈತ ಸಂಘ ಆಗ್ರಹ.

Date:

ವಿಧಾನ ಸಭೆಯಲ್ಲಿ ಚರ್ಚಿಸದೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳಿಗೆ ಸಂಬಳ, ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ದುಪ್ಪಟ್ಟು ಸಂಬಳ ( ಈಗಿರುವ ಸಂಬಳಕ್ಕೆ ಎರಡು ಪಟ್ಟು) ಅನುಮೋದನೆಗೆ ಕಳುಹಿಸಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಾಯ್ದೆ ತಿರಸ್ಕರಿಸಲು ಮನವಿ ಸಲ್ಲಿಸಿ ಒತ್ತಾಯಿಸಿದರು.

1001719751
ಮೊಳಕಾಲ್ಮೂರು ತಾಲೂಕು ಕಛೇರಿ

ಈ ವೇಳೆ ಮಾತನಾಡಿದ ಮುಖಂಡರು, “ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಕಾಯ್ದೆಯನ್ನು ಸದನದಲ್ಲಿ ಚರ್ಚಿಸದೇ ಕಾಂಗ್ರೆಸ್, ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಪಕ್ಷಗಳು ಪರ-ವಿರೋಧವಿಲ್ಲದೇ ಸಂಬಳ ಹೆಚ್ಚುವರಿಗೆ ಅನುಮೋದನೆ ನೀಡಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ ಖಂಡಿಸುತ್ತಾ ರಾಜ್ಯ ಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೇ ವಾಪಾಸ್ ಕಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನ ಸಾಮಾನ್ಯರ ಮೇಲೆ ಸ್ಟಾಂಪ್. ಸರ್ವೇ, ಭೂದಾಖಲೆ, ರಿಜಿಸ್ಟ್ರೇಷನ್, ಕಂದಾಯ, ಪಹಣಿ, ಬಸ್ಸಿನ ದರ, ವಿದ್ಯುತ್, ನೀರಿನ ದರ, ಮುಂತಾದ ವಸ್ತುಗಳ ಮೇಲೆ ನಾಲ್ಕುಪಟ್ಟು ತೆರಿಗೆ ಹಾಕಿ ಆ ಹಣದಲ್ಲಿ ಸಂಬಳ ಭತ್ಯೆ ಹೆಚ್ಚಿಸಿಕೊಂಡು, ಮೋಜು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

“ಈ ಬಾರಿ ಅಧಿವೇಶನ ಪ್ರಾರಂಭದಿಂದ ಮೇಲ್ಮನೆ, ಕೆಳ ಮನೆಯಲ್ಲಿ ಜನರ ಸಮಸ್ಯೆಗಳ ಮತ್ತು ಸಾರ್ವಜನಿಕರಿಗೆ ಆಗತ್ಯ ಸೌಲಭ್ಯಕ್ಕೆ ಚರ್ಚೆ ಮಾಡಲು ಸದನದಲ್ಲಿ 20- 30 ಜನ ಶಾಸಕರು ಇರುತ್ತಾರೆ. ಉಳಿದ ಶಾಸಕರು ಸಭೆಗೆ ಗೈರು ಹಾಜರಿಯಾಗಿ ಅವರ ಸ್ವಂತ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್ ಗೆ ಶಾಸಕರು ಅವಮಾನ ಮಾಡುತ್ತಿದ್ದು ಇವರಿಗೆ ಸಂಬಳ, ಸಾರಿಗೆ ಹೆಚ್ಚು ಮಾಡಿಕೊಳ್ಳುವ ನೈತಿಕತೆ ಇಲ್ಲ. ಸಭಾಧ್ಯಕ್ಷರು ಸದನದಲ್ಲಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದೆ. ಆದ್ದರಿಂದ ಶಾಸಕರು, ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದರಿಂದ ಸರ್ಕಾರವನ್ನು ವಜಾಮಾಡಬೇಕೆಂದು ಒತ್ತಾಯಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001719754
ಮನವಿ ಸ್ವೀಕರಿಸಿದ ತಹಶೀಲ್ದಾರರು

“ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಒದಗಿಸಿಲ್ಲ. ವಿಧವಾ ವೇತನ, ಮಾನಾಸನ ಕೊಟ್ಟಿಲ್ಲ, ರೈತರಿಗೆ ವಿದ್ಯುತ್‌ ಸರಬರಾಜು ಹಾಗೂ ಅಕ್ರಮ-ಸಕ್ರಮ ಗಳಂತ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರ ಮೋಜು ಮಸ್ತಿಯ ಜೀವನಕ್ಕೆ ಸದನದಲ್ಲಿ ಚರ್ಚೆಯಿಲ್ಲದೆ, ಎಲ್ಲಾ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿ ಸಂಬಳ ಸಾರಿಗೆ, ಇತರೆ ಭತ್ಯೆ ಎರಡು ಪಟ್ಟು ಜಾಸ್ತಿ ಮಾಡಿಕೊಂಡು ಮತದಾರರಿಗೆ ನಾಡಿನ ಜನತೆಗೆ ದ್ರೋಹ ಬಗೆಯುತ್ತಿರುವ ಸದನವನ್ನು ವಜಾಮಾಡಬೇಕೆಂದು” ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಮರ್ಲಹಳ್ಳಿ ರವಿಕುಮಾರ್, ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ, ಗುಂಡೂರು ತಿಮ್ಮಪ್ಪ, ಚಂದ್ರಪ್ಪ, ದೊಡ್ಡಸೂರಯ್ಯ, ದೊಡ್ಡಯ್ಯ, ಮುತ್ತುಗರಳ್ಳಿ ವಿಜಯಣ್ಣ ಈಶ್ವರಪ್ಪ ಕೆಟಿ, ರಾಜಣ್ಣ, ಈರಣ್ಣ, ಪಿ ಟಿ ಹಳ್ಳಿ ನಿಂಗಣ್ಣ ಹಾಗೂ ಇತರರು ಭಾಗವಹಿಸಿದ್ದರು.‌

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...