ಚಿತ್ರದುರ್ಗ | ಜನರಿಗೆ ವಿಜ್ಞಾನದ ಆವಿಷ್ಕಾರ ಬೇಕು ಆದರೆ, ವೈಜ್ಞಾನಿಕ ಚಿಂತನೆ ಬೇಡವಾಗಿದೆ: ಪ್ರೊ. ನರೇಂದ್ರ ನಾಯಕ್

Date:

ಜನರಿಗೆ ವಿಜ್ಞಾನದ ಆವಿಷ್ಕಾರಗಳಾದ ಮೊಬೈಲ್, ಟಿವಿ, ವಾಟ್ಸಾಪ್, ಕಾರುಗಳು ಬೇಕು. ಆದರೆ, ವೈಜ್ಞಾನಿಕವಾದ ಚಿಂತನೆಗಳು ಬೇಡವಾಗಿವೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘದ ರಾಜ್ಯಾಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದ ಹೊರವಲಯದ ಭೋವಿಗುರುಪೀಠದಲ್ಲಿ ಎಸ್‌ಜೆಎಸ್ ಸಮೂಹ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು” ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಮನುಷ್ಯರು ಬುದ್ಧಿ ಜೀವಿಗಳು. ಯಾವುದೇ ವಿಷಯವನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ನಾವು ಯಾವುದನ್ನು ಪ್ರಶ್ನಿಸದೇ ಇರುವುದರಿಂದಲೇ ನಮ್ಮ ಮೇಲೆ ಹಲವು ರೀತಿಯ ಗಧಾ ಪ್ರಹಾರಗಳಾಗುತ್ತಿವೆ. ನಮ್ಮ ಸಂವಿಧಾನದಲ್ಲಿಯೇ ಕಲಂ 51ರ ಅಡಿಯಲ್ಲಿ ಜನತೆಯ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ನೀಡಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕಿದೆ” ಎಂದು ತಿಳಿಸಿದರು.

“ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಬೇರೆಯವರು ಹೇಳಿದ್ದನ್ನು ಕೇಳುವಂತ ಮನೋಭಾವ ಮೂಡುತ್ತದೆ. ಕೆಲವು ವಂಚಕರು ಜನರಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲದಿರುವದನ್ನು ಮನಗಂಡು ಅದರ ಲಾಭವನ್ನು ಪಡೆಯುತ್ತಿದ್ದಾರೆ. ಇದರಿಂದ ಅವರನ್ನು ಶೋಷಣೆ ಮಾಡುತ್ತಿದ್ದಾರೆ. ಕೆಲಸ ಮಾಡದೇ ಜನರಿಗೆ ಸುಳ್ಳು ಜೋತಿಷ್ಯದ ಮೂಲಕ ವಂಚಿಸುವುದು, ಸಂಖ್ಯಾಶಾಸ್ತ್ರ, ಪವಾಡ ಇವೆಲ್ಲವು ಜನರನ್ನು ಮೋಸ ಮಾಡುವ ಬೇರೆ ಬೇರೆ ವಿಧಾನಗಳಾಗಿವೆ. ಇದಕ್ಕಿಂತ ಮಿಗಿಲಾಗಿ ಸ್ವರ್ಗ, ನರಕಗಳು. ಇದೆಲ್ಲವನ್ನು ದುಡಿಯದಿರುವ ವರ್ಗ ಸೃಷ್ಟಿ ಮಾಡಿ ದುಡಿಯವ ವರ್ಗದ ಜನರನ್ನು ಶೋಷಣೆ ಮಾಡುತ್ತಿದೆ. ದುಡಿಯದ ವರ್ಗ ಬೇರೆಯವರಿಗೆ ಸ್ವರ್ಗವನ್ನು ತೋರಿಸುತ್ತೇನೆ ಎಂದು ತಿಳಿಸಿ ಅವರನ್ನು ಭ್ರಮೆಯಲ್ಲಿ ಇರಿಸಿ ಕುಳಿತು ತಿನ್ನುವ ವರ್ಗ. ಇದು ಮನುಷ್ಯನ ಶೋಷಣೆಯ ಪ್ರವೃತ್ತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯ ಇದೆ. ಜಗತ್ತಿನಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ ವೈಜ್ಞಾನಿಕ ಚಿಂತನೆಯಿಂದಲೇ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಯಾವುದೇ ಭಕ್ತಿಯಿಂದಾಗಲಿ, ಮೌಢ್ಯದಿಂದಾಗಲಿ, ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ. ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ವೈಜ್ಞಾನಿಕವಾಗಿ ಚಿಂತಿಸುವುದು ಬೇಡವಾಗಿದೆ. ನಂತರ ಇದಕ್ಕೆ ಸಬೂಬನ್ನು ಹೇಳಲಾಗುತ್ತದೆ.‌ ಸಾವಿರಾರು ವರ್ಷಗಳಿಂದ ವೈಜ್ಞಾನಿಕ ಚಿಂತನೆ ನಮ್ಮಲ್ಲೇ ಇತ್ತು. ಈಗಲೂ ಇದೆ. ಅದನ್ನ ಕಂಡುಕೊಳ್ಳಬೇಕಷ್ಟೇ” ಎಂದು ತಿಳಿಸಿದರು.

WhatsApp Image 2025 01 30 at 8.42.16 AM

“ವೈಜ್ಞಾನಿಕ ಚಿಂತನೆ ಎಂದರೆ ಬರೀ ತಂತ್ರಜ್ಞಾನವಲ್ಲ, ಮೂಲಭೂತವಾದ ಸಂಶೋಧನೆಗಳು. ದೇಶದ ಗಂಭೀರವಾದ ವಿಷಯಗಳನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಗಹನವಾದ ಚರ್ಚೆ ಮಾಡುತ್ತಿದ್ದೇವೆ. ಇಂದಿನ ವೈಭವದಲ್ಲಿ ನಮ್ಮನ್ನು ಮರೆಯಲಾಗುತ್ತಿದೆ. ಇದನ್ನು ಬಿಟ್ಟು ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯವಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಅರೆಬರೆ ಕಾಮಗಾರಿ ಮಧ್ಯೆಯೇ ಹೆದ್ದಾರಿ ಟೋಲ್ ಸಂಗ್ರಹ; ರಾಜ್ಯ ರೈತ ಸಂಘ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.‌

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...