ಚಿತ್ರದುರ್ಗ | ಕಳಪೆ ಬಿತ್ತನೆಬೀಜ ಪೂರೈಕೆ; ಆತಂಕಕ್ಕೀಡಾದ ರೈತರು

Date:

ಖಾಸಗಿ ಕಂಪನಿಯೊಂದು ಕಳಪೆ ಬಿತ್ತನೆಬೀಜ ಪೂರೈಕೆ ಮಾಡಿದ್ದು, ಈ ಬಿತ್ತನೆಬೀಜವನ್ನು ಬಿತ್ತಿದ ಬಳಿಕ ಬೆಳೆದು ಹೂವು ಕಾಯಿ ಬಿಡದೆ, ಬರೀ ಗಿಡ ಬೆಳೆದು ನಿಂತಿರುವುದನ್ನು ಕಂಡು ರೈತರು ಆತಂಕಕ್ಕೆ ಈಡಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತಮ ಬಿತ್ತನೆ ಬೀಜಗಳನ್ನು ರೈತರು ಅಂಗಡಿಯಿಂದ ಖರೀದಿಸಿ ತಂದು ಉಳುಮೆ ಮಾಡಿದ ನಂತರ ಸಾಮಾನ್ಯವಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುತ್ತಾರೆ. ಆದರೆ ರೈತರೊಬ್ಬರು ಬಿತ್ತನೆ ಮಾಡಿದ ಫಸಲಿನ ಸೂಚನೆಯಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಮೇ. ಆಗ್ರೋ ಸೀಡ್ಸ್‌ ಕಾರ್ಪೊರೇಷನ್

“ಖಾಸಗಿ ಕಂಪನಿಯೊಂದರ ತೊಗರಿ ಬಿತ್ತನೆಬೀಜವನ್ನು ದಾವಣಗೆರೆಯ ಅಂಗಡಿಯೊಂದರಿಂದ ಖರೀದಿಸಿ ತಂದು ತಮ್ಮ 12 ಎಕರೆ ಜಮೀನಿಗೆ ಬಿತ್ತನೆ ಮಾಡಲಾಗಿತ್ತು. ಆದರೆ ಬರೀ ಗಿಡ ಮಾತ್ರ ಬೆಳೆದು ನಿಂತಿದ್ದು, ಗಿಡದಲ್ಲಿ ಯಾವುದೇ ಹೂವು ಕಾಯಿ ಬಿಟ್ಟಿಲ್ಲ” ಎಂದು ಚಳ್ಳಕೆರೆ ತಾಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ರೈತ ಡಿ ಟಿ ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಮೇ. ಆಗ್ರೋ ಸೀಡ್ಸ್‌ ಕಾರ್ಪೊರೇಷನ್ 1

ಗ್ರಾಮದ ಯುವರೈತ ಜಿ ಬಿ ತಿಪ್ಪೇಸ್ವಾಮಿ ಮಾತನಾಡಿ “ನಮ್ಮ ಗಜ್ಜುಗಾನಹಳ್ಳಿ ಗ್ರಾಮದ ಹಲವು ರೈತರು ದಾವಣಗೆರೆ ಮೇ ಆಗ್ರೋ ಸೀಡ್ಸ್‌ ಕಾರ್ಪೊರೇಷನ್ ಅವರಿಂದ ಖಾಸಗಿ ಕಂಪೆನಿ ಸೀಡ್ಸ್ ತೊಗರಿ ಬಿತ್ತನೆಬೀಜವನ್ನು ತಂದು ಬಿತ್ತನೆ ಮಾಡಿದ್ದಾರೆ. ತೊಗರಿ ಗಿಡ ಹೂವು, ಕಾಯಿ ಬಿಟ್ಟಿಲ್ಲ. ಕಂಪನಿಯವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಶೀತದ ವಾತಾವರಣಕ್ಕೆ ಹಾಗಾಗಿದೆಯೆಂದು ಹೇಳುತ್ತಾರೆ” ಎಂದು ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಮಣ್ಣುಗಣಿಗಾರಿಕೆಯಿಂದ ರಿಪಬ್ಲಿಕ್ ಬಳ್ಳಾರಿಯಂತಾಗುತ್ತಿಯೇ ಹರಿಹರ?; ಮಂಜುನಾಥ ಕುಂದುವಾಡ ಅನುಮಾನ

“ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಜಮೀನಿಗೆ ಭೇಟಿ ನೀಡಿ ಬೆಳೆಯನ್ನು ವೀಕ್ಷಣೆ ಮಾಡಬೇಕು. ಅಂಗಡಿ ಮಾಲೀಕನ ಲೈಸೆನ್ಸ್ ರದ್ದುಮಾಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಪರಿಹಾರ ನೀಡಬೇಕು. ಕೃಷಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನ್ಯಾಯ ದೊರಕಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ವಿಜಯಕುಮಾ‌ರ್, ಡಿ ಎಸ್ ಮನೋಹರ್, ರೈತ ತಿಪ್ಪೇಸ್ವಾಮಿ ಸೇರಿದಂತೆ ಇತರ ರೈತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...