ಸರ್ಕಾರ ಇತ್ತೀಚೆಗೆ ಹೆಚ್ಚಿಸಿರುವ ಪೆಟ್ರೋಲ್–ಡೀಸೆಲ್ ಬೆಲೆ ಇಳಿಕೆಗೆ ಚಿತ್ರದುರ್ಗ ಜಿಲ್ಲಾ ಟ್ರಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಲಾರಿ ಮಾಲೀಕರ ಜೀವನ ಶೋಚನೀಯವಾಗಿದೆ. ಈಗಾಗಲೇ ಹೆಚ್ಚಿಸಿರುವ ಟ್ಯಾಕ್ಸ್ ಹಾಗೂ ಇತರ ತೆರಿಗೆ ಏರಿಕೆ ಲಾರಿ ಮಾಲೀಕರಿಗೆ ಹೊರೆಯಾಗಿದೆ. ವಿಎಲ್‍ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯೂ ಲಾರಿ ಮಾಲೀಕರ ಮೇಲೆ ಹೇರಿದಂತಾಗಿದೆ. ಇದೆಲ್ಲದರ ಪರಿಣಾಮ ಸಾಗಾಣಿಕೆ ವೆಚ್ಚವು ದುಬಾರಿಯಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಸ್ತೆ ತೆರಿಗೆಯ ಮೇಲೆ ಮೂರರಷ್ಟು ಸೆಸ್ ಜಾಸ್ತಿಯಾಗಿದೆ. ಎಲ್ಲ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಲಾರಿ ಉದ್ಯಮ ನಡೆಸುತ್ತಿರುವ ಡಿಮಾಂಡ್ ಅಂಡ್ ಸಪ್ಲೈನಲ್ಲಿ ಸಾಧ್ಯವಾಗುವುದಿಲ್ಲ” ಎಂದರು.
“ಲಾರಿ ಮಾಲೀಕರು ಉದ್ಯಮದಿಂದ ವಿಮುಖರಾಗುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು” ಎಂದು ಜಿಲ್ಲಾ ಟ್ರಕ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದಲಿತರ ಓಣಿಗಿಲ್ಲ ನೀರಿನ ಭಾಗ್ಯ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ್ ಸಿಂಗನಾಳ್, ಅಬ್ದುಲ್ ಸತ್ತಾರ್, ಸಂತೋಷ್, ಅನ್ವರ್ ಬಿ, ಎಂ ಎಸ್ ನಸ್ರುಲ್ಲಾ, ಸಲೀಂ, ಮುಜೀಬ್ ಇದ್ದರು.





