ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸದೆ 5 ವರ್ಷ ಕಳೆದಿದೆ, ಗ್ರಾಮ ಪಂಚಾಯತ್ ಅವಧಿ ಮುಗಿದು ಒಂದು ತಿಂಗಳಾದರೂ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿದೆ. ಮೂರು ಹಂತದ ಪಂಚಾಯತ್ ಚುನಾವಣೆಗಳನ್ನು ಮುಂದೂಡಿ ಆಡಳಿತಾಧಿಕಾರಿ ನೇಮಿಸಿ, ಶಾಸಕ ಕೇಂದ್ರಿತ ಆಡಳಿತಕ್ಕೆ ಸರ್ಕಾರ ಸಜ್ಜಾಗಿದೆ. ಮಹಿಳೆಯರಿಗೆ, ಪ.ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರದಿಂದ ದೂರವಿಡುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆ ಎಂದು ವಿರೋಧಿಸಿ ಚಿತ್ರದುರ್ಗ ತಾಲೂಕು ಯಳಗೋಡು ಗ್ರಾಮ ಪಂಚಾಯತಿ ಕಛೇರಿ ಮುಂಬಾಗ ಗ್ರಾಮ ಪಂಚಾಯತ ಸದಸ್ಯರ ಮಹಾ ಒಕ್ಕೂಟದ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
“ಅವಧಿ ಮುಗಿದರೂ ಗ್ರಾಮ ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡದೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ, ಗ್ರಾಮ ಸರ್ಕಾರಗಳನ್ನು ನಾಶ ಮಾಡುವ ಮೂಲಕ ಸ್ಥಳೀಯ ಅಧಿಕಾರದ ಮೂಲಕ ರಾಜಕೀಯ ಶಕ್ತಿ ಪಡೆಯುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಹಿಂದುಳಿದ ವರ್ಗಗಳ ರಾಜಕೀಯ, ಸಾಮಾಜಿಕ ನ್ಯಾಯವನ್ನು ತುಳಿಯಲಾಗುತ್ತಿದೆ” ಎಂದು ಆರೋಪಿಸಿದರು.
“ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ವ್ಯವಸ್ಥೆ ಇಲ್ಲದೆ ಕೇಂದ್ರ ಸರ್ಕಾರದಿಂದ ಬರಬೇಕಾದ 15 ನೇ ಹಣಕಾಸಿನ ಅನುದಾನ 5 ಸಾವಿರ ಕೋಟಿ ಬರದಿರುವದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ನಿಗದಿತ ಸಮಯದಲ್ಲಿ ಚುನಾವಣೆ ನಡಸದಿರುವುದೇ ಅನುದಾನ ಬರದಿರಲು ಕಾರಣ. ಸರ್ಕಾರ ಶೀಘ್ರದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪೌರ ಕಾರ್ಮಿಕರ ಮೇಲೆ ಹಲ್ಲೆ: ರಕ್ಷಣೆ ಸೂಕ್ತ ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
ಯಳಗೋಡು ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳಾದ ಅನಿತಾ, ಕವಿತಾ, ಜಿಎಸ್ ರೂಪ, ಬಸಮ್ಮ, ಬಾನು, ನಿರ್ಮಲ, ಶಾಂತಮ್ಮ, ಹನುಮಂತಪ್ಪ, ರುದ್ರೇಶ್, ಪಾಲಯ್ಯ, ಬಸವರಾಜಪ್ಪ ಹಾಗೂ ಗ್ರಾಮಸ್ಥರು, ಚಿತ್ರದುರ್ಗ ಜಿಲ್ಲಾಧ್ಯಕ್ಷ ರಹಮತ್ ಉಲ್ಲಾ ಸೇರಿದಂತೆ ಇತರರು ಹಾಜರಿದ್ದರು.
.





