ಚಳ್ಳಕೆರೆ ನಗರಸಭೆಯ 2026-27 ರ ಬಜೆಟ್ ನ ತಯಾರಿಗೆ ಸಾರ್ವಜನಿಕರಿಂದ ಸಲಹೆ ಸೂಚನೆ, ಬೇಡಿಕೆ ಸ್ವೀಕರಿಸಲು ಪ್ರಥಮ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಗರಸಭಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದು ಚಳ್ಳಕೆರೆಯ ಸಾರ್ವಜನಿಕರು ಭಾಗವಹಿಸಲು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಆಡಳಿತಾಧಿಕಾರಿಗಳು ಸೂಚನೆ ಹೊರಡಿಸಿದ್ದು, ಡಿಸೆಂಬರ್ 10, 2025 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರಸಭಾ ಕಛೇರಿಯ ಕೌನ್ಸಿಲ್ ಸಭಾಂಗಣದಲ್ಲಿ (ರಂಗಮಂದಿರ) ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಚಳ್ಳಕೆರೆ ನಗರಸಭೆ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚಳ್ಳಕೆರೆ ನಗರಸಭೆಯ 2026-27ನೇ ಸಾಲಿನ ಬಜೆಟ್ ಕುರಿತ ಪ್ರಥಮ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಲಿತರ ಅಡಮಾನ ಭೂಮಿ ಕಬಳಿಕೆ ಆರೋಪ: ಕ್ರಮಕ್ಕೆ ದಸಂಸ ಒತ್ತಾಯ
ನಗರಸಭೆಯ ಬಜೆಟ್ ತಯಾರಿ ಪೂರ್ವಭಾವಿ ಸಭೆಗೆ ನಗರದ ಸಾರ್ವಜನಿಕರು, ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸ್ಥಾಯಿಸಮಿತಿ ಅಧ್ಯಕ್ಷರುಗಳು, ಮಾಜಿ ಸದಸ್ಯರುಗಳು, ವರ್ತಕರು/ಉದ್ಯಮಿಗಳು/ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು, ದಲಿತ ಸಂಘಟನೆ ಮುಖಂಡರು, ಕನ್ನಡ ಪರ ಸಂಘಟನೆಗಳು, ಹಿರಿಯ ನಾಗರೀಕರು, ವಿಶೇಷ ಚೇತನ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ರೈತ ಸಂಘಟನೆ ಮುಖಂಡರು, ಕಾರ್ಮಿಕ ಸಂಘಟನೆ ಮುಖಂಡರು, ಪತ್ರಕರ್ತರು, ಮಹಿಳಾ ಸಂಘಗಳ ಪ್ರತಿನಿಧಿಗಳು, ನಗರದ ಗಣ್ಯವ್ಯಕ್ತಿಗಳು ಸಕಾಲಕ್ಕೆ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ನಗರದ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಿದ್ದಾರೆ.





