ಚಿತ್ರದುರ್ಗ | ಶೋಷಿತರ ವಿಮೋಚನೆಗೆ ಧಮ್ಮಪಥವೇ ಮಾರ್ಗ: ಧಮ್ಮದೀಕ್ಷಾ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅಭಿಮತ

Date:

ಧಮ್ಮದೀಕ್ಷಾ ದಿನದ ಅಂಗವಾಗಿ ಅಂಬೇಡ್ಕರ್ ವಿಚಾರ ವೇದಿಕೆ ಚಿತ್ರದುರ್ಗ ಮತ್ತು ಜಂಬೂದ್ವೀಪ ಕರ್ನಾಟಕ ಇವರ ಸಹಯೋಗದಲ್ಲಿ ಚಿತ್ರದುರ್ಗ ಪುಲೆ ಅಧ್ಯಯನ ಕೇಂದ್ರದಲ್ಲಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಬುದ್ದರ ಪ್ರತಿಮೆಗೆ ಪುಷ್ಪಾರ್ಚನೆಗೈದು ಸಾಮೂಹಿಕವಾಗಿ ತ್ರಿಸರಣವನ್ನು ಪಠಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರು, ಮುಖಂಡರು “ಶೋಷಿತರ ವಿಮೋಚನೆಗೆ ಧಮ್ಮಪಥವೇ ಮಾರ್ಗ” ಎಂದು ಅಭಿಮತ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ರಾಮಚಂದ್ರಪ್ಪ “ಬಹುತ್ವ ಭಾರತಕ್ಕೆ ಬುದ್ಧ ಜ್ಞಾನವನ್ನು ಬೋಧಿಸಿದರು. ಚಾರ್ತುವರ್ಣಗಳಿಂದ ಬೇಸತ್ತ ಜನರಿಗೆ ಒಳ್ಳೆಯ ಜೀವನ ಕಟ್ಟಿಕೊಳ್ಳುವುದಕ್ಕೆ ಬುದ್ಧ ಸಂದೇಶಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ರಾಮಣ್ಣ ಬಾಲೇನಹಳ್ಳಿ “ಬಾಬಾ ಸಾಹೇಬ್ ಅಂಬೇಡ್ಕರರು ಶೋಷಿತರು ಅನುಭವಿಸುತ್ತಿರುವ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು ತೊಲಗಿಸಿ ಸ್ವಾಭಿಮಾನ ಮತ್ತು ಘನತೆಯ ಬದುಕನ್ನು ನಡೆಸುವಂತಾಗಲು ಶೋಷಿತರು ಪ್ರಜ್ಞಾಪೂರ್ವಕವಾಗಿ ಬುದ್ದನ ಹಾದಿಯಲ್ಲಿ ಸಾಗುತ್ತ ಧಮ್ಮಪಥದಲ್ಲಿ ನಡೆದಾಗಲೇ ಆ ಸಮುದಾಯಗಳು ವಿಮೋಚನೆ ಕಡೆ ದೃಢತೆಯ ಹೆಜ್ಜೆ ಹಾಕಲು ಸಾಧ್ಯ ಎಂದು ತಿಳಿಸಿದ್ದರು. ಜಿಲ್ಲೆಯಲ್ಲಿ ಬುದ್ಧನ ಉಪಾಸಕರು ಲಕ್ಷಾಂತರ ಜನರಿದ್ದರೂ ಅದಕ್ಕಾಗಿ ಬುದ್ಧ ವಿಹಾರದ ಅವಶ್ಯಕತೆ ಇದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಿಂತಕ ಎಚ್.ಆನಂದಕುಮಾರ್ ಮಾತನಾಡಿ “ಬುದ್ದಧಮ್ಮವನ್ನು ಅಂಬೇಡ್ಕರ್ ಅವರು ನವಬೌದ್ಧ ಧಮ್ಮವೆಂದೇ ಕರೆದಿದ್ದರು. ಈ ಧಮ್ಮದಲ್ಲಿ ಸಮತೆ, ಕರುಣೆ, ಮೈತ್ರಿ ಅಂತರ್ಗತವಾಗಿದೆ. ಈ ಧಮ್ಮವು ವೈಚಾರಿಕ ನೆಲೆಯದ್ದಾಗಿದ್ದು ಎಲ್ಲಾ ಬಗೆಯ ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಮುಕ್ತವಾಗಿದ್ದು ‘ಬುದ್ದ ಮತ್ತು ಆತನ ಧಮ್ಮ’ ಗ್ರಂಥವು ಬುದ್ದ ಧಮ್ಮವನ್ನು ತಿಳಿಯಲು ಮಹತ್ವದ್ದಾಗಿದೆ” ಎಂದು ತಿಳಿಸಿದರು.

ಪ್ರಾಧ್ಯಾಪಕರಾದ ಎಚ್.ಡಿ.ಪೋತೆ ಮಾತನಾಡಿ “ವೈಜ್ಞಾನಿಕ ಅರಿವಿರುವ ಸಮಾಜ ಒಪ್ಪಿಕೊಳ್ಳಬಹುದಾದ ಒಂದೇ ಧಮ್ಮವೆಂದರೆ ಬೌದ್ದಧಮ್ಮವೆಂದು, ಸಂವಿಧಾನ ಮತ್ತು ಬೌದ್ದಧಮ್ಮವೇ ಶೋಷಿತರ ಪಾಲಿನ ಆಶಾಕಿರಣವಾಗಿವೆ” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ: ಗಣತಿದಾರರ ವಿರೋಧ

“ಬುದ್ಧ ಧಮ್ಮ ಅನುಸರಣೆ ಸರಳವಾಗಿದ್ದು, ಬುದ್ಧ ಚಿಂತನೆಗಳಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ” ಎಂದು ವೇದಾಂತ ಯಳಂಜಿ ತಿಳಿಸಿದರು.

ಜಂಬೂದ್ವೀಪದ ಕಾರ್ಯದರ್ಶಿ ಸಿದ್ದೇಶ್ ಬಾಬಾಸಾಹೇಬರ 22 ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಆಯೋಜಕರಾದ ಪ್ರಕಾಶ್, ರಾಘವೇಂದ್ರ, ರಾಮಶೇಖರ, ಹನುಮಂತಪ್ಪ, ಪಾತಪ್ಪ, ಪ್ರಕಾಶ್, ಸಿದ್ದಪ್ಪ ಟಿ, ಪ್ರದೀಪ್, ಕುಮಾರ್ ಹೆಚ್ ಸೇರಿದಂತೆ ಇತರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...