ಚಿತ್ರದುರ್ಗ | ಸಹಕಾರ ಸಂಘಗಳ ಮೂಲಕ ಕಳಪೆ ರಸಗೊಬ್ಬರ ವಿತರಣೆ, ಜಂಟಿ ನಿರ್ದೇಶಕರ ಮೇಲೆ ಕ್ರಮಕ್ಕೆ ರೈತ ಸಂಘ ಆಗ್ರಹ.

Date:

ಮುಂಗಾರು ಆರಂಭವಾಗಿದ್ದು ರೈತರು ಬಿತ್ತನೆ ಸಂಭ್ರಮದಲ್ಲಿದ್ದಾರೆ. ಬಿತ್ತನೆಗೆ ಬೀಜ, ರಸಗೊಬ್ಬರ ಇತರೆ ಸೌಲಭ್ಯಗಳನ್ನು ಅಣಿ ಗೊಳಿಸುವುದು ವಾಡಿಕೆ.‌ ಆದರೆ ಚಿತ್ರದುರ್ಗದಲ್ಲಿ ರೈತರ ಸೇವಾ ಸಹಕಾರ ಸಂಘಗಳಿಗೆ ನಾಲ್ಕು ವರ್ಷಗಳ ಹಿಂದೆ ತಯಾರಾದ ಕಳಪೆ ಗೊಬ್ಬರವನ್ನು ಸರಬರಾಜು ಮಾಡಿ ರೈತರಿಗೆ ವಿತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮೊಳಕಾಲ್ಮೂರು ತಹಶೀಲ್ದಾರರ ಮೂಲಕ ಮನವಿ ನೀಡಿ ಆಗ್ರಹಿಸಿದರು.‌

1002069300

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ರೈತರ ಸೇವಾ ಸಹಕಾರ ಸಂಘಗಳಿಗೆ 2021 ರ ಸಾಲಿನ ಹಿಂದೆ ತಯಾರಾದ ಕಳಪೆ ಗೊಬ್ಬರವನ್ನು ಸರಬರಾಜು ಮಾಡಿ ರೈತರಿಗೆ ವಿತರಿಸಿದ್ದು, ಕೊನೆಹಂತದಲ್ಲಿ ರೈತರಿಗೆ ಕಳಪೆ ಗೊಬ್ಬರ ಕಳೆದ 4 ವರ್ಷಗಳ ಹಿಂದೆ ತಯಾರಿಸಿದ ಗೊಬ್ಬರ ಚೀಲದ ಮೇಲೆ ಹಾಕಿರುವ ದಿನಾಂಕ ನೋಡಿಕೊಂಡಾಗ ರೈತರಿಗೆ ಗೊತ್ತಾಗಿದೆ. ರೈತರು ಗೊಬ್ಬರ ತೆಗೆದುಕೊಂಡು ಹೋಗಿ ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರಶ್ನೆ ಮಾಡಿದಾಗ ರೈತರೊಂದಿಗೆ ಅವಾಚ್ಯ ಶಬ್ದಗಳಿಂದ ವ್ಯಂಗ್ಯವಾಗಿ ಮಾತಾಡಿದ್ದು, ರೈತರನ್ನು ಅವಮಾನ ಮಾಡಿದ್ದಾರೆ. ಹಾಗೂ ಹಳೆಯ ಗೊಬ್ಬರ ಎಂದು ಗೊತ್ತಿದ್ದರೂ ರೈತರಿಗೆ ಮೋಸ ವಂಚನೆ ಮಾಡಿರುವ ಜಂಟಿ ಕೃಷಿ ನಿರ್ದೇಶಕರನ್ನು ತಕ್ಷಣವೇ ಅಮಾನತ್ತಿನಲ್ಲಿಟ್ಟು ಕಳಪೆ ಗೊಬ್ಬರ ವಿತರಣೆ ಮಾಡಿರುವುದನ್ನು ತನಿಖೆ ಮಾಡಿಸಬೇಕು, ರೈತರ ಬಗ್ಗೆ ಲಘುವಾಗಿ ಮಾತಾಡಿರುವ ಅಧಿಕಾರಿ ಕ್ಷಮೆ ಯಾಚಿಸಬೇಕೆಂದು ಕೃಷಿ ಸಚಿವರು ಪ್ರಕರಣವನ್ನು ಗಂಭೀರವಾಗಿ ತುರ್ತು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ರೈತ ಸಂಘ ಮುಖಂಡರು ಒತ್ತಾಯಿಸಿದರು.

ರೈತರು ಬೆಳೆಗೆ ಗೊಬ್ಬರ ಹಾಕುವುದು ಸರಿಯಾದ ಕಾಲ – ಕಾಲಕ್ಕೆ ಬೆಳವಣಿಗೆ, ಉತ್ತಮ ಇಳುವರಿ ಪಡೆಯಲು. ಸರ್ಕಾರದ ಸ್ವಾಮ್ಯದ ಅಧಿಕಾರಿಗಳು, ಸಹಕಾರ ಸಂಘಗಳಲ್ಲಿಯೇ 4 ವರ್ಷದ ಹಳೇ ಗೊಬ್ಬರ ವಿತರಿಸುತ್ತಿರುವುದು ನೋಡಿದರೆ ಈ ಪ್ರಕರಣದಲ್ಲಿ ಭ್ರಷ್ಟರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002069299

ಇದೇ ಹಳತಾದ ಗೊಬ್ಬರವನ್ನು ಚಿತ್ರದುರ್ಗ ಜಿಲ್ಲೆಯಾದ್ಯಾಂತ ಸಹಕಾರಿ ಸೊಸೈಟಿಗಳಿಗೆ ಕೊಟ್ಟಿರುವ ಗುಮಾನಿಯಿದೆ. ರೈತರಿಗೆ ಗೊತ್ತಾದ ತಕ್ಷಣ ಸರಬರಾಜು ಮಾಡಿರುವ ಕಳೆದ ಗೊಬ್ಬರವನ್ನ ಹಾಕುವ ರೈತರಿಗೆ ಬೆದರಿಕೆ ಹಾಕುವ ಹಂತಕ್ಕೆ ಭ್ರಷ್ಟರು ಯೋಜನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌ 4 ವರ್ಷದ ಹಿಂದಿನ ಹಳೇ ಗೊಬ್ಬರ ಸರಬರಾಜು ಮಾಡಿರುವುದನ್ನು ಜಿಲ್ಲೆಯಾದ್ಯಾಂತ ತನಿಖೆ ನಡೆಸಬೇಕು. ಸರಭರಾಜು ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಹಳೇ ಗೊಬ್ಬರ ಹಾಕಿ ಬೆಳೆನಷ್ಟವಾಗುತ್ತಿರುವ ರೈತರಿಗೆ ಪರಿಹಾರ ನೀಡಬೇಕು. ಮುಂಗಾರು ಹಂಗಾಮ ಪ್ರಾರಂಭವಾಗಿದ್ದು ಜಿಲ್ಲೆಯಾದ್ಯಾಂತ ಔಷಧ, ಬೀಜ, ಗೊಬ್ಬರಕ್ಕೆ ರೈತರು ಪರದಾಡದಂತೆ ಎಲ್ಲಾ ಅಂಗಡಿಗಳಲ್ಲಿ ದಾಸ್ತಾನು ಮಾಡಬೇಕು ಗುಣಮಟ್ಟದಿಂದ ಕೂಡಿರಬೇಕು. ದಾಸ್ತಾನು ಮತ್ತು ಬೆಲೆ ವಿವರ ಅಂಗಡಿ ಮುಂದೆ ಪ್ರದರ್ಶನಕ್ಕೆ ಹಾಕಿರಬೇಕು ಎಂದು ಒತ್ತಾಯಿಸಿದರು.‌

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ, ಕೃಷಿ ಘಟಕಗಳಿಗೆ ರೈತರ ಅರ್ಜಿ ಆಹ್ವಾನ.‌

ಈ ವೇಳೆ, ‌ರೈತಸಂಘದ ಮುಖಂಡರಾದ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ, ಮರ್ಲಹಳ್ಳಿ ರವಿಕುಮಾರ್, ದೊಡ್ಡ ಪಾಪಣ್ಣ, ದೊಡ್ಡ ಸೂರಯ್ಯ, ಚಂದ್ರಣ್ಣ, ದಾನಪ್ಪ, ವೆಂಕಟೇಶ್, ಹೇಮಣ್ಮ, ಮುತ್ತಯ್ಯ, ಮಲ್ಲಯ್ಯ, ರಾಜಣ್ಣ, ಕೋಟಿ ವೀರಣ್ಣ, ಡಿಜಿ ಹಳ್ಳಿ ವೀರಣ್ಣ, ತಿಮ್ಮಪ್ಪ ಸೇರಿದಂತೆ ಹಲವು ಮುಖಂಡರು, ರೈತರು ಭಾಗವಹಿಸಿದ್ದರು.‌

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಅಡುಗೆ ಅನಿಲ ಕೊರತೆಯಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಗ್ಯಾಸ್ ಸರಬರಾಜು...

ಚಿತ್ರದುರ್ಗ | ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ : ಸಚಿವ ಡಿ.ಸುಧಾಕರ್

ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ...

ಬೀದರ್‌ | ಸಮಗ್ರ ಕೃಷಿಯಲ್ಲಿ ಖುಷಿ ಕಂಡ ರೈತ ದಂಪತಿ : ಇವರ ಬದುಕು ಅನ್ನದಾತರಿಗೆ ಮಾದರಿ!

ಬಸವಣ್ಣನವರ ʼಕಾಯಕವೇ ಕೈಲಾಸʼ ಎಂಬಂತೆ ನಿಷ್ಠೆಯಿಂದ ದುಡಿತಿನಿ, ಮಾರುಕಟ್ಟೆ ವ್ಯವಸ್ಥೆಗಾಗಿ ಅಲೆದಾಡುವುದಿಲ್ಲ,...

ಚಿತ್ರದುರ್ಗ | ಭಾರತೀಯ ವಾಸ್ತುಶಿಲ್ಪ ಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯ : ಡಾ.ಹೊನ್ನೂರ ಸ್ವಾಮಿ

ಭಾರತೀಯ ದೇವಾಲಯಗಳ ಪರಂಪರೆಗೆ ಸುದೀರ್ಘ ಹಾಗೂ ಪ್ರಾಚೀನ ಇತಿಹಾಸವಿದೆ. ಮುಂದಿನ ದಿನಗಳಲ್ಲಿ...