ಚಿತ್ರದುರ್ಗ | ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ತಿರುಕಯಾನ ಇಂಗ್ಲೀಷ್ ಆವೃತ್ತಿ ಜರ್ನಿ ಆಫ್ ಎ ಯೋಗ ಮಾಸ್ಟರ್ ಲೋಕಾರ್ಪಣೆ

Date:

ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಕುರಿತು ಆರ್ಥಿಕ ಚಿಂತಕ ಮತ್ತು ಸಾಹಿತಿ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ ರಚಿಸಿದ್ದ ‘ತಿರುಕಯಾನ’ ನಾಟಕದ ಇಂಗ್ಲಿಷ್ ಆವೃತ್ತಿ (Journey of a Yoga Master) “ಜರ್ನಿ ಆಫ್ ಎ ಯೋಗ ಮಾಸ್ಟರ್” ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರ್ ದಾಸ್ ಜಿ ಅವರ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು

1002460904

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ. ಎಂ. ಹೆಚ್. ರುದ್ರಮುನಿ ಅವರು ಕೃತಿ ಅವಲೋಕನ ಮಾಡುತ್ತಾ ಮಾತನಾಡಿ, “ರಂಗಭೂಮಿ ಎಲ್ಲರಿಗೂ ತಲುಪುವ ಸರಳ ಮತ್ತು ಸುಂದರ ಸಮೂಹ ಮಾಧ್ಯಮ. ಜನರ ಮನಸ್ಸು ಮತ್ತು ಹೃದಯಗಳ ಬೇಗುದಿಗೆ ತಣ್ಣೀರು ಒಯ್ಯುವ ಸಾಧನ. ಒಳ್ಳೆಯ ರಂಗಪ್ರದರ್ಶನಕ್ಕೆ ಒಳ್ಳೆಯ ಸಾಹಿತ್ಯ ಬೇಕು. ಭಾಷೆ ಒಮ್ಮೆ ‌ಕೇಳಿದರೆ ಸಾಕು ನೆನಪಿನಲ್ಲಿ ಉಳಿಯುವಂತಿರಬೇಕು. ಪಠ್ಯ ರೂಪದಲ್ಲಿ ಪ್ರಕಟವಾಗುವ ನಾಟಕ ಕೃತಿಗಳಾದರೂ ಓದಿಸಿಕೊಳ್ಳುವಾಗಲೂ ಓದುಗನ ಮನಸ್ಸನ್ನ ಸೆರೆ ಹಿಡಿಯಬೇಕು. ಇವತ್ತಿನ ವಿದ್ಯುನ್ಮಾನ ಸಾಮಾಜಿಕ ಜಾಲತಾಣಗಳ ಕ್ರಿಯಾಶೀಲತೆಯ ಮಧ್ಯೆಯೂ ಜನರು ಪ್ರೇಕ್ಷಕರಾಗಿ ಬಂದು ಕುಳಿತು ಹೊರಜಗತ್ತನ್ನು ಮರೆಯುವಂತಿರಬೇಕು” ಎಂದು ಅಭಿಪ್ರಾಯಪಟ್ಟರು.

“ಇಂತಹ ಬಹುತೇಕ ಆಶಯ ಮತ್ತು ಸಾಧ್ಯತೆಗಳನ್ನು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಅವರು ತಮ್ಮ ‘ತಿರುಕಯಾನ’ ನಾಟಕದಲ್ಲಿ ಅಮೂರ್ತಗೊಳಿಸಿದ್ದಾರೆ. ಶತಾಯುಷಿ ರಾಘವೇಂದ್ರ ಸ್ವಾಮೀಜಿಯವರ ಜೀವನಾರಂಭದಿಂದ ಅಂತ್ಯದವರೆಗಿನ ಘಟನೆಗಳನ್ನು ಆಯ್ದು, ಜೋಡಿಸಿ, ನಾಟಕ ಕೃತಿಯೊಂದು ಬೇಡುವ ಬಹುತೇಕ ಕೌಶಲ್ಯಗಳನ್ನು ಅನ್ವಯಿಸಿ ಗದ್ಯ-ಪದ್ಯ ಸಮ್ಮಿಶ್ರಗಳಿಂದ ನಿರೂಪಿಸಿದ್ದಾರೆ” ಎಂದು ವಿಶ್ಲೇಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002460906

ಆಶ್ರಮದ ಕಾರ್ಯದರ್ಶಿ ಎಸ್. ಕೆ. ಬಸವರಾಜನ್ ಕೃತಿ ಲೋಕಾರ್ಪಣೆ ಮಾಡಿ “ಮುಂದಿನ ದಿನಗಳಲ್ಲಿ ಪೂಜ್ಯದ್ವಯರುಗಳು ಕಟ್ಟಿರುವ ಈ ಆಶ್ರಮವನ್ನು ಅವರ ಆಶಯದಂತೆ ಹೆಚ್ಚು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯಾರ್ಥಿನಿಯರ ಹಾಸ್ಟೆಲ್ ಆಹಾರದಲ್ಲಿ ಹುಳು ಪತ್ತೆ ವರದಿ; ಹಾಸ್ಟೆಲ್ ಗೆ ಇಡಿ, ಲೋಕಾಯುಕ್ತ ಅಧಿಕಾರಿಗಳ ಭೇಟಿ

ಕಾರ್ಯಕ್ರಮದಲ್ಲಿ ಅನುವಾದಕರಾದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಡಾ. ಜಿ.ಏನ್.ಮಲ್ಲಿಕಾರ್ಜುನಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್. ಬಿ. ಮಂಜುನಾಥ್, ಪ್ರಶಿಕ್ಷಣಾರ್ಥಿ ಕುಮಾರಿ ಮಧುಮತಿ, ಆಡಳಿತಾಧಿಕಾರಿ ಪಾಂಡುರಂಗಮೂರ್ತಿ, ಆಕಾಶವಾಣಿ ಉದ್ಘೋಷಕ ನವೀನ್ ಮಸ್ಕಲ್ , ಪಿಆರ್ ಓ ಸಂತೋಷ್, ಆಶ್ರಮದ ಟ್ರಸ್ಟಿಗಳು ಹಾಗೂ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...