ಚಿತ್ರದುರ್ಗ | ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಲೀನ ಜನವಿರೋಧಿ

Date:

35,000 ಸರ್ಕಾರಿ ಶಾಲೆಗಳನ್ನು ಮುಚ್ಚುವ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗಿರುವ ಸರ್ಕಾರದ ನೀತಿ ಜನವಿರೋಧಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಹುನ್ನಾರ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು “ಇತ್ತೀಚಿನ ಸರ್ಕಾರದ ನಡೆಗಳನ್ನು ಗಮನಿಸಿದರೆ ರಾಜ್ಯದಲ್ಲಿ 7,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಪ್ರಾರಂಭಿಸಲು ತರಾತುರಿಯಲ್ಲಿ ಸಾವಿರಾರು ಕೋಟಿಗಳನ್ನು ವಿನಿಯೋಗಿಸಲು ಮುಂದಾಗಿದ್ದಾರೆ. ಇರುವ ಗ್ರಾಮೀಣ ಭಾಗದ ಶಾಲೆಗಳು ಸ್ವತಂತ್ರ ಪೂರ್ವದ ಪಳೆಯುಳಿಕೆಗಳನ್ನು ನೆನಪಿಸುವಂತೆ ಇವೆ .ಅದರೆ ಅವುಗಳನ್ನು ಮರು ನಿರ್ಮಾಣ ಮಾಡುವ ಕಡೆಗೆ ಹೋಗುವ ಬದಲು ಗ್ರಾಮ ಪಂಚಾಯತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ .
ಅಲ್ಲಿ ಆಕರ್ಷಣೀಯವಾಗಿ ಎಲ್ಕೆಜಿಯಿಂದ ಪ್ರಾರಂಭಿಸಿ ಎರಡನೇ ಪಿಯುಸಿವರೆಗೂ ಒಂದೇ ಸೂರಿನಡಿಯಲ್ಲಿ ಶಿಕ್ಷಣ ಒದಗಿಸಬೇಕೆನ್ನುವ ಕಲ್ಪನೆ ನೋಡಲು ಆಕರ್ಷಕವಾಗಿದೆ. ಆದರೆ ಅದರ ಉಪಯೋಗ ಎಲ್ಲರಿಗೂ ದೊರಕಬಹುದೇ ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಶಿಕ್ಷಣ ಇಲಾಖೆಯ ನಿಜವಾದ ಆಡಳಿತ ಶಿಕ್ಷಣ ಸಚಿವರ ಕೈಯಲ್ಲಿ ಇಲ್ಲ , ಐಎಎಸ್ ಅಧಿಕಾರಿಗಳ ಕೈಯಲ್ಲಿದೆ, ಅವರು ತಮ್ಮ ಆಡಳಿತಕ್ಕೆ ಅನುಕೂಲವಾಗಲಿ, ತಮ್ಮ ಮೂಗಿನ ನೇರಕ್ಕೆ ನೀತಿಗಳನ್ನು ರೂಪಿಸುತ್ತಿದ್ದಾರೆ. ಗ್ರಾಮೀಣ ಶಾಲೆಗಳಿಗೆ ಭೇಟಿ ಕೊಡುವುದು ಅನುದಾನ ಕೊಡುವುದು ಇದರಿಂದ ತಮಗೇನು ಲಾಭವಿರುವುದಿಲ್ಲ ಎಂದು ಮುಚ್ಚುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸುತ್ತಿದ್ದಾರೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈಗಾಗಲೇ ಭಾರತದ ಬಿಹಾರ್, ಉತ್ತರ ಪ್ರದೇಶಗಳಲ್ಲಿ ಶಿಕ್ಷಣವಿಲ್ಲದೆ ಚಿಕ್ಕ ಚಿಕ್ಕ ಮಕ್ಕಳು ಕೂಲಿಗೋಸ್ಕರ ಇಡೀ ದೇಶದಾದ್ಯಂತ ವಲಸೆ ಹೋಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ಹಾವಳಿ, ಸರ್ಕಾರಿ ಶಾಲೆಗಳ ಅಲ್ಪಸ್ವಲ್ಪ ಸೌಲಭ್ಯಗಳನ್ನು ಬಳಸಿಕೊಂಡು ಅವಕಾಶ ವಂಚಿತ ಮಕ್ಕಳು ಮೇಲೆ ಬರುತ್ತಿದ್ದರು. ಆದರೆ ಈಗಿನ ಸರ್ಕಾರದ ಒಬ್ಬ ಅವಿವೇಕಿ ಅಪ್ರಯೋಜಕ ಶಿಕ್ಷಣ ಸಚಿವ ಅಧಿಕಾರಿಗಳ ಕೈಗೆ ಅಧಿಕಾರವನ್ನು ಕೊಟ್ಟು ತಾನು ಮಾತ್ರ ಇದಕ್ಕೆ ಸಂಬಂಧ ಇಲ್ಲ ಎನ್ನುವಂತೆ ಅಡ್ಡಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಒಂದು ಕಡೆ ಕಂದಾಯ ಸಚಿವರು ಹಗಲು ರಾತ್ರಿ ಇಲಾಖೆಯ ಉನ್ನತಿ ಕಡೆಗೆ ರೈತರ ಸೌಲಭ್ಯಗಳ ಕಡೆಗೆ ಶ್ರಮಪಡುತ್ತಿದ್ದರೆ. ಇನ್ನು ಆರೋಗ್ಯ ಸಚಿವರು ಆರೋಗ್ಯ ಇಲಾಖೆಯನ್ನು ಖಾಸಗಿ ,ಕಾರ್ಪೊರೇಟ್ ಆಸ್ಪತ್ರೆಗಳಿಗೆ ಕೆಂಪು ಹಾಸು ಸ್ವಾಗತ ನೀಡಿ, ಆರೋಗ್ಯ ಸಚಿವರು ಆರೋಗ್ಯ ಇಲಾಖೆಯನ್ನು ಖಾಸಗಿ/ಕಾರ್ಪೊರೇಟ್ ಆಸ್ಪತ್ರೆಗಳಿಗೆ ಬಿಟ್ಟುಕೊಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಗ್ರಾಮೀಣ ಭಾಗದ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ವಿಲೀನಗೊಳಿಸಿ ಒಂದನ್ನು ಮಾತ್ರ ಉಳಿಸಿಕೊಳ್ಳಲಾಗುತ್ತಿದೆ. ಲ್ಯಾಬ್ ಟೆಕ್ನಿಷಿಯನ್ ಮತ್ತು ವೈದ್ಯರನ್ನು ಹಲವು ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ. ಕಿರಿಯ ಆರೋಗ್ಯ ಸಹಾಯಕರಿಗೆ 5,000 ಬದಲು 10,000 ಜನಸಂಖ್ಯೆಯ ಜವಾಬ್ದಾರಿ ನೀಡಲಾಗುತ್ತಿದೆ.‌ ಹೆಲ್ತ್ ಇನ್ಸ್‌ಪೆಕ್ಟರ್‌ಗಳನ್ನು ತಾಲ್ಲೂಕು ಕೇಂದ್ರಕ್ಕೆ ನಿಯೋಜಿಸಲಾಗುತ್ತಿದೆ. ಇದರ
ಪರಿಣಾಮವಾಗಿ ಬಡ ಜನರಿಗೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅಥವಾ ಸಾಯುವ ಪರಿಸ್ಥಿತಿ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“28,000 ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಹಂತ ಹಂತವಾಗಿ ಹೊರಹಾಕಲಾಗುತ್ತಿದೆ. ಇದೇ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು (DCM) ವಿರೋಧ ಪಕ್ಷದಲ್ಲಿದ್ದಾಗ ನೌಕರರನ್ನು ಖಾಯಂ ಮಾಡುವ ಭರವಸೆ ನೀಡಿ ಈಗ ವಚನಭ್ರಷ್ಟರಾಗಿದ್ದಾರೆ. ಅನಿವಾರ್ಯವಾಗಿ ಬಡಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು ಅಥವಾ ಸಾಯಬೇಕು. ಈ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಬ್ಬರು ತಮ್ಮ ತಮ್ಮ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳನ್ನು ಐಎಎಸ್ ಅಧಿಕಾರಿಗಳಿಗೆ ದತ್ತು ಕೊಟ್ಟು ತಾವು ತಮ್ಮ ಪಕ್ಷದ ವಕ್ತಾರಿಕೆ ಮಾಡಿಕೊಂಡು ಬಡ ಮಕ್ಕಳ ಶಿಕ್ಷಣ ಮತ್ತು ಬಡವರ ಆರೋಗ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇಂತಹ ವಚನಭ್ರಷ್ಟರಿಗೆ ತಿಳಿ ಹೇಳುವವರು ಯಾರು ? ಅನ್ಯಾಯಕ್ಕೆ ಇದಕ್ಕಿಂತ ನಿದರ್ಶನ ಬೇಕೆ? ಎಂದು ಆರೋಪಿಸಿದರು.

1003269640

“ಸಾರ್ವಜನಿಕ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಜೀವಪರ ಕಾಳಜಿ ಹೊಂದಿದಂತೆ ಪೋಸು ನೀಡುವ ಆಂದೋಲನ ಜೀವಿಗಳು, ಈ ದೇಶ ಕಟ್ಟುವ ವಿಚಾರಗಳಲ್ಲಿ ಮೌನವಾಗಿದ್ದಾರೆ.
ಹಿಂದೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಇವರು, ಈಗಿನ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರಕ್ಕೆ ಗುರಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳು ಕೇವಲ ಮೊಸಳೆ ಕಣ್ಣೀರಾಗಿದ್ದು, ಅವರು ಸಮಾಜವಾದ ಮತ್ತು ಶೋಷಣೆಯಂತಹ ಪದಗಳನ್ನು ಮರೆತಿದ್ದಾರೆ. ಆಡಳಿತ ನಡೆಸುತ್ತಿರುವ ಸರ್ಕಾರದ ಗಂಜಿ ಕೇಂದ್ರಗಳ ಅಯಕಟ್ಟಿನ ಹುದ್ದೆಗಳಲ್ಲಿ ಕುಳಿತುಕೊಂಡು ಇಕ್ಕಟ್ಟಿನ ಸಂದರ್ಭಗಳಲ್ಲಿ ಸರ್ಕಾರಕ್ಕೆ ಗುರಾಣಿಯಂತೆ ಕೆಲಸ ಮಾಡುತ್ತಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಸಂಸದಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ

“ಕರ್ನಾಟಕ ಮತ್ತೊಮ್ಮೆ ಅನಕ್ಷರಸ್ಥರ ,ಅನಾರೋಗ್ಯ ಪೀಡಿತರ ರಾಜ್ಯವಾಗುವುದರಲ್ಲಿ ಸಂಶಯವೇ ಇಲ್ಲ. ಒಂದು ಕಡೆ ಸರ್ಕಾರದ ಕುಮ್ಮಕ್ಕಿನಿಂದ 35,000 ಗ್ರಾಮೀಣ ಶಾಲೆಗಳು ಬೀಗ ಜಡಿಯಲಿವೆ, ಅದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಾಗಿಲು ಬಂದ್ ಆಗಲಿವೆ. ಇನ್ನಾದರೂ ಬಡವರ ,ಬಗ್ಗೆ ದಮನಿತರ ಬಗ್ಗೆ ಯೋಚಿಸಿ ಇಂತಹ ದುಷ್ಟ ದುರುಳ ಕಾನೂನುಗಳ, ನೀತಿಗಳ ಮೂಲಕ ಶಾಲೆ ಮತ್ತು ಆರೋಗ್ಯ ಕೇಂದ್ರಗಳನ್ನು ಜನಸಾಮಾನ್ಯರೇ ರಕ್ಷಿಸಬೇಕೆಂದು” ಮನವಿ ಮಾಡಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...