ಚಿತ್ರದುರ್ಗ | ರಾಜಕಾರಣಿಗಳಿಗೆ ಕಿವುಡುತನ ಹೆಚ್ಚು, ಕೇಳಿಸಲು ಹೋರಾಟ ಮಾಡಿ: ಬಸವಕುಮಾರ ಶ್ರೀ

Date:

“ಹತ್ತು ನಿಮಿಷ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಸಮಯ ಕೊಡಿಸಲು ಸಚಿವರಲ್ಲಿ ಕೇಳಿದ್ದೀರಿ. ಸಮಾವೇಶದಲ್ಲಿ ಇದು ನಿಮ್ಮ ಒಂದು ಬೇಡಿಕೆ. ರಾಜಕಾರಣಿಗಳಿಗೆ ಕಿವುಡುತನ ಹೆಚ್ಚಿರುತ್ತದೆ. ಅವರಿಗೆ ಸಮುದಾಯದ ಸಂಕಷ್ಟ ಕೇಳಿಸಲು ಸಂಘಟಿತ ರೀತಿಯಲ್ಲಿ ಹೋರಾಟ ಮಾಡಬೇಕು. ಇಂತಹ ತಳ- ಶೋಷಿತ ವರ್ಗಗಳ ಸಮಾವೇಶಕ್ಕೆ ಮುಖ್ಯಮಂತ್ರಿ, ಸಚಿವರು ಬರಬೇಕು. ಅವರು ಸಂಕಷ್ಟ ಕೇಳಿಸಿಕೊಳ್ಳಬೇಕು” ಎಂದು ಚಿತ್ರದುರ್ಗ ಮುರುಘಾ ಮಠದ ಬಸವಕುಮಾರ ಶ್ರೀಗಳು ಅಭಿಪ್ರಾಯಪಟ್ಟರು.

ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದ ಒಳಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಚಿತ್ರದುರ್ಗದ ಮುರುಘಾ ಮಠ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಿದೆ. ಇಲ್ಲಿ ಎಲ್ಲರೂ ಸಮಾನರು. ನಮ್ಮ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಎಲ್ಲಾ ಸಮುದಾಯದವರೂ ಇರುತ್ತಾರೆ. ಅನೇಕ ಭಕ್ತರು ಪಿಂಜಾರ ನದಾಫ್, ಮುಸ್ಲಿಂ ಸಮುದಾಯವರೇ ಇರುತ್ತಾರೆ” ಎಂದು ಚಿತ್ರದುರ್ಗದ ನದಾಫ್ ಪಿಂಜಾರ ಸಮಾಜದ ಕಾರ್ಯಕ್ರಮದಲ್ಲಿ ಮುರುಘಾ ಮಠದ ಬಸವಕುಮಾರ ಶ್ರೀಗಳು ತಿಳಿಸಿದರು.

“ಈ ಸಮಾವೇಶ ಕೀರ್ತಿ ಹೆಚ್ಚಿಸಿದ ವ್ಯಕ್ತಿ 10ನೇ ತರಗತಿಯಲ್ಲಿ 625 ಅಂಕ ಪಡೆದ ನಿಮ್ಮ ಸಮಾಜದ ಹುಡುಗ, ಪಿಂಜಾರ ಸಮುದಾಯದ ಕೀರ್ತಿ. ಅವರಿಗೆ ಮಠದ ಪರವಾಗಿ ಅಭಿನಂದಿಸಲಾಗುವುದು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002968077

“ಭಾರತ ಭಾವೈಕ್ಯತೆ, ಸೌಹಾರ್ದತೆಯ ದೇಶ. ನಿಮ್ಮ ಸಮುದಾಯದ ಸಮಾವೇಶದಲ್ಲಿ ಬೇರೆ ಸಮುದಾಯದವರು ಇದರ ಯಶಸ್ಸಿಗೆ ಕೆಲಸ ಮಾಡಿದ್ದು ನಿಜವಾದ ಭಾವೈಕ್ಯತೆ. ಯಾವುದೇ ಸಮಾಜದಲ್ಲಿ ನಿಕೃಷ್ಟ ಕುಟುಂಬಗಳ ಸಮಸ್ಯೆಗಳನ್ನು ತಿಳಿಯಬೇಕು. ಇಲ್ಲಿಯೇ ಹತ್ತಿರದ ಯೋಗವನಬೆಟ್ಟ, ಕವಾಡಿಗರ ಹಟ್ಟಿ ಸೇರಿ ಬೇರೆ ಬೇರೆ ಕಡೆ ಗುಡಿಸಲುಗಳನ್ನು ಹಾಕಿಕೊಂಡವರು ಇದ್ದಾರೆ.   ಮಳೆಬಂದಾಗ ಅವರ ಸಮಸ್ಯೆ ಹೆಚ್ಚಾಗಿರುತ್ತದೆ. ಈ ರೀತಿಯ ಕುಟುಂಬಗಳಲ್ಲಿ ಪಿಂಜಾರ ಸಮುದಾಯದವರೂ ಇದ್ದಾರೆ. ಹಲವಾರು ವರ್ಷಗಳಿಂದ ಅಲ್ಲಿ ವಾಸವಿದ್ದರೂ ಅವರಿಗೆ ಒಂದು ಸೂರು ಒದಗಿಸುವ ಕೆಲಸ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಮಾಡಿಲ್ಲ. ಅಂತಹವರ ಸಮಸ್ಯೆ ಬಗೆಹರಿಸಲು ನಾಗರಿಕ ಸಮಾಜ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ನಾವು ನಾಗರಿಕರು ಎನಿಸಿಕೊಂಡು ಫಲವೇನಿದೆ” ಎಂದು ಪ್ರಶ್ನಿಸಿದರು.

“ನಿಮ್ಮ ಸಮುದಾಯದಲ್ಲಿ ಸಮೀಕ್ಷೆ ನಡೆಸಿ ಯಾರು ಎಂಬಿಬಿಎಸ್, ಐಐಟಿ, ಎಂಜಿನಿಯರಿಂಗ್ ಸೇರಿದಂತೆ ಬೇರೆ ಬೇರೆ ಕಡೆ ಉನ್ನತ ಅವಕಾಶ ಪಡೆದಿದ್ದಾರೆಯೇ ತಿಳಿದುಕೊಳ್ಳಿ. ಸಮುದಾಯದ ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶಗಳನ್ನು ಒದಗಿಸಿಕೊಡಲು ಸಹಾಯ ಮಾಡಬೇಕು.  ಈ ನಿಟ್ಟಿನಲ್ಲಿ ಸಮಾಜ ಸಂಘಟನೆಯಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್
“ಪಿಂಜಾರ ಸಮುದಾಯ ಅತ್ಯಂತ ಸೌಹಾರ್ದತೆಯ ಮತ್ತು ಸಹೃದಯಿ ಸಮಾಜ.‌ ಈ ಸಮಾಜವನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ.‌ ಈ ಸಮಾಜದ ಸಂಪರ್ಕದಲ್ಲಿ ನಾನು ಬೆಳೆದಿದ್ದೇನೆ.
ಈ ಸಮುದಾಯದ ಇಬ್ರಾಹಿಂ ಸಾಹೇಬರು ಸಮಾಜಕ್ಕೆ ಗೌರವ ತಂದುಕೊಟ್ಟ ವ್ಯಕ್ತಿ. ಎಲ್ಲರನ್ನೂ ಗೌರವಪೂರ್ವಕವಾಗಿ ಕಂಡು ಒಟ್ಟಿಗೆ ಸೇರಿಸಿ ಮುನ್ನೆಡೆಸುತ್ತಿದ್ದ ವ್ಯಕ್ತಿತ್ವ ಅವರದು” ಎಂದು ನೆನಪಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಳ ಸಮುದಾಯಗಳ ಬಗ್ಗೆ ಕಳಕಳಿ ಇರುವ ಮುಖ್ಯಮಂತ್ರಿ. ನಿಮ್ಮ ಸಂಕಷ್ಟ ಹೇಳಿಕೊಳ್ಳಲು ಮುಖ್ಯಮಂತ್ರಿಗಳ ಸಮಯ ಕೇಳಿದ್ದೀರಿ, ನಮ್ಮ ಸಚಿವರೊಂದಿಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತನಾಡಿ ನಿಮಗೆ ಆದಷ್ಟು ಶೀಘ್ರದಲ್ಲಿ ಸಮಯ ಕೊಡಿಸುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಚಳ್ಳಕೆರೆ ಶಾಸಕ ರಘುಮೂರ್ತಿ ಮಾತನಾಡಿ
“ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದ ಮತ್ತು ನಂತರ ಎಲ್ಲಾ ಜಾತಿ ಧರ್ಮದ ಪರವಾಗಿರುವ ಮತ್ತು ಸಮಾನವಾಗಿ ಕಾಣುವ ಪಕ್ಷ.‌ ಪಿಂಜಾರ ಸಮುದಾಯ ಹೆಚ್ಚಾಗಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದು, ಹಳ್ಳಿಗಳಲ್ಲಿ ಎಲ್ಲಾ ಸಮುದಾಯಗಳ ಜೊತೆಗೆ ಸೌಹಾರ್ದತೆಯಿಂದ ಬದುಕು ಸಾಗಿಸುವ ಸಮಾಜ. ಎಲ್ಲರೊಂದಿಗೆ ಬೆರೆತು ವಿಶ್ವಾಸ ಗಳಿಸುವ ಸಮಾಜ. ಈ ಸಮುದಾಯದ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು” ಎಂದು ಅಭಿಪ್ರಾಯಪಟ್ಟರು.‌

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಲೀಲ್ ಸಾಬ್, “ಪಿಂಜಾರ ಸಮುದಾಯವು ಪ್ರವರ್ಗ ಒಂದರಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಿದೆ. ಇದನ್ನು ಕೊಡಿ ಎಂದು ನಾವು ಯಾರನ್ನು ಕೇಳಿರಲಿಲ್ಲ. ಇದೇ ಕಾರಣದಿಂದ ನಮ್ಮನ್ನು ದೂರದಲ್ಲಿಟ್ಟು ನೋಡಲಾಗುತ್ತಿದೆ. ಈ ಅನುಕೂಲತೆ ಇದ್ದರೂ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಉನ್ನತ ಹುದ್ದೆಗಳು ಮತ್ತು ಹಾಸ್ಟೆಲ್ ಗಳಲ್ಲಿ ಸೀಟು ಸಿಗುತ್ತಿಲ್ಲ. ಅತ್ಯಂತ ತಳವರ್ಗದಲ್ಲಿರುವ ಹಳ್ಳಿಗಳ ಪಿಂಜಾರ ಸಮುದಾಯದ ಜನರು ಇನ್ನು ಸಂಕಷ್ಟದಲ್ಲಿದ್ದಾರೆ. ನಮ್ಮ ಸಮುದಾಯದ ಸಮಸ್ಯೆ ಹೇಳಿಕೊಳ್ಳಲು ಮುಖ್ಯಮಂತ್ರಿಯವರಲ್ಲಿ ಸಮಯ ಕೇಳುತ್ತಿದ್ದು, ಮೂರು ವರ್ಷದಿಂದ ಪ್ರಯತ್ನಿಸುತ್ತಾ ಬಂದಿದ್ದರೂ ಅವರು ನಮ್ಮ ಸಮುದಾಯದ ಸಂಕಷ್ಟ ಕೇಳಲು ಹತ್ತು ನಿಮಿಷ ಕೂಡ ಸಮಯ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

1002968076

ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಮತ್ತು ಪದವಿ ಪೂರ್ವ ಶಿಕ್ಷಣದಲ್ಲಿ ಉತ್ತಮ ಅಂಕ ಪಡೆದ ಪಿಂಜಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೂ ಕೂಡ ಸನ್ಮಾನಿಸಲಾಯಿತು. ವಕೀಲರ ಸಮಾವೇಶದಲ್ಲಿ ವಕೀಲರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ. ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಬದಲಾವಣೆ  ವಿಚಾರ; ಯತೀಂದ್ರಗೆ ನೋಟೀಸ್ ಏಕಿಲ್ಲ? ಶಾಸಕ ಬಸವರಾಜ್ ಶಿವಗಂಗಾ ಪ್ರಶ್ನೆ

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ತಾಜ್ ಪೀರ್, ಸದಸ್ಯ ಅಮೃತೇಶ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ರಷೀದ್, ಉಪಾಧ್ಯಕ್ಷ ಷಫಿವುಲ್ಲಾ, ಮಹಮದ್ ಇಮಾಮ್ ಕಾರ್ಯದರ್ಶಿ ಅಲೀಪೀರ್, ಅಕ್ಬರ್ ಭಾಷಾ, ಖಜಾಂಚಿ ದಾದಾಪೀರ್,ರಾಜ್ಯ ಸಮಿತಿಯ ಗರೀಬ್ ಅಲಿ, ಜಿಡಿ ನದಾಫ್, ಮೌಲಾಸಾಬ್ ಬೆಂಡಿಗೇರಿ, ಮುಖಂಡರಾದ ರಾಜಾ ಸಾಬ್, ರಿಯಾಜ್ ನಾಗ್ತೆ, ಶಬಾಬುದ್ದೀನ್ ಕೊಪ್ಪಳ, ದಾದಾ ಕಲಂದರ್, ಲಾಲ್ ಸಾಬ್ ನದಾಫ್, ಎಸ್ ಹೆಚ್ ಮುದಕವಿ, ಪ್ರೊ. ಸನಾವುಲ್ಲ, ಮೆಹಬೂಬ್ ಅಲಿ, ಶಬಾನ, ದಾಲಾಶಲಿ,   ಜಬೀವುಲ್ಲಾ , ಬುಡೇನಸಾಬ್, ವಹೀದಾ ಬೇಗಂ, ಬಷೀರ್ ಅಹಮದ್, ಇಮಾಮ್ ಸಾಬ್, ಸುಭಾನು, ಪಿಡಿಒ ಕಲೀಮ್, ಅಬ್ದುಲ್ ,  ಚಾಂದಪೀರ್,  ನಿಸಾರ್ ಅಹಮದ್, ಗೌಸ್ ಪೀರ್, ಮೆಹಬೂಬ್ ಸೇರಿದಂತೆ ಚಿತ್ರದುರ್ಗ ಮತ್ತು ಎಲ್ಲಾ ಜಿಲ್ಲೆ,  ತಾಲೂಕುಗಳ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳ  ಸಮುದಾಯದ ಜನರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...