ಚಿತ್ರದುರ್ಗ | ಭದ್ರಾ ಹೋರಾಟಕ್ಕೆ ಸಂಘಟನೆಗಳ ಶಕ್ತಿ

Date:

 ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಒನಕೆ ಓಬವ್ವ ವೃತ್ತದಲ್ಲಿ ರೈತರ ಉಪವಾಸ ಸತ್ಯಾಗ್ರಹದಲ್ಲಿ ಗುರುವಾರ ಅನೇಕ ಸಂಘಟನೆಗ ಪದಾಧಿಕಾರಿಗಳು, ಸ್ವಾಮೀಜಿಗಳು ಪಾಲ್ಗೊಂಡು ಧ್ವನಿಗೂಡಿಗೂಡಿಸಿದರು.

ಒಂಟಿಕಂಬ ಮಠದ ತಿಪ್ಪೇರುದ್ರಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ನಂದಮಸಝದ್ಸೇ ವಾಲಾಲ್ ಸ್ವಾಮೀಜಿ ಮಾತನಾಡಿ, ಬಯಲುಸೀಮೆ ಚಿತ್ರದುರ್ಗ ದಿಗ್ಗಜ ಸಾಹಿತಿಗಳು, ನಟರನ್ನು ನಾಡಿಗೆ ಕೊಡುಗೆ ನೀಡಿದೆ. ಇತಿಹಾಸ ಕ್ಷೇತ್ರದ ಕಣಜವಾಗಿದೆ. ಆದರೆ, ಇಲ್ಲಿನ ಜನರ ಭವಣೆ ಹೇಳತೀರದಾಗಿದೆ ಎಂದರು.

ಕುಡಿಯುವ ನೀರಿಗೂ ಪರಿತಪಿಸುವ ಕಾಲ ಎದುರಾಗಿದೆ. ಬೆಳೆ ನಷ್ಟ ಕಾರಣಕ್ಕೆ ಕೃಷಿಕರು ಸಿಲಗಾರರಾಗಿದ್ದಾರೆ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದೆ. ಆದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿನ ಜನರ ಬದುಕು ಉನ್ನತಗೊಳಿಸಲು ಏಕೈಕ ಮಾರ್ಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು. ಇದಕ್ಕಾಗಿ ಬಜೆಟ್‌ನಲ್ಲಿ ದೊಡ್ಡಮೊತ್ತದ ಹಣ ತೆಗೆದಿರಿಸಬೇಕು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆಗೆ ತಕ್ಷಣ ಮುಂದಾಗಬೇಕೆಂದು ಆಗ್ರಹಿಸಿದರು.

ಇಲ್ಲಿನ ಜನರಿಗೆ ನೀವು ಯಾವುದನ್ನೂ ಪುಕ್ಕಟೆ ನೀಡಬೇಡಿ. ನೀರೊಂದು ನೀವು ಕೊಟ್ಟರೇನಾವುಗಳೇ ನಿಮಗೆ ಆಹಾರ ಕೊಟ್ಟು, ವಿದ್ಯುತ್ ಸೇರಿ ಎಲ್ಲವನ್ನೂ ಖರೀದಿಸಿ, ನಿಮ್ಮ ಖಜಾನೆ ತುಂಬಿಸುತ್ತೇವೆ ಎಂದರು.

ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ದೇಶದಲ್ಲಿ ಉಪವಾಸ ಚಳವಳಿಯೇ ಕಣ್ಮರೆ ಆಗಿರುವ ಸಂದರ್ಭ ಜಿಲ್ಲೆಯ ರೈತರು ಅನ್ನ-ನೀರು ತೊರೆದು ಧರಣಿ ಕುಳಿತಿರುವುದು ಬದ್ಧತೆಗೆ ಸಾಕ್ಷಿಯಾಗಿದೆ. ಇವರ ಹೋರಾಟವನ್ನೇ ಹತ್ತಿಕ್ಕುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ನಾವು ನೀರು ಕೇಳಿದ್ರೆ ಆಳುವ ವರ್ಗ ವಿಷ ಕೊಡ್ತಿದೆ. ಇಲ್ಲಿನ ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ನಮ್ಮ ಮುಂದಿನ ಪೀಳಿಗೆ ಬದುಕು ದುಸ್ಥರವಾಗಲಿದೆ ಎಂದು ಎಚ್ಚರಿಸಿರು.

ಮಾದಿಗ ಮೀಸಲಾತಿ ಹೋರಾಟಗಾರ ಎಂ.ಆರ್.ಶಿವರಾಜ್ ಮಾತನಾಡಿ, ನಿರಂತರ ಹೋರಾಟ ನಡೆದಿವೆ. ಆದರೂ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಆರೋಪದಲ್ಲಿ ಮುಳುಗಿವೆ ಎಂದು ದೂರಿದರು.

ದೇಶದಲ್ಲಿ ರಾಷ್ಟ್ರೀಯ ಮನ್ನಣೆಗೆ ಅರ್ಹವಾಗಿರುವ ಏಕೈಕ ಯೋಜನೆ ಭದ್ರಾ ಮೇಲ್ದಂಡೆ ಆಗಿದೆ. ಆದರೆ, ಘೋಷಿಸುತ್ತಿಲ್ಲ, 5,300 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ರೈತಸಂಘ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ನೀರೊಂದು ಕೊಟ್ಟರೇ ಭೂಮಿಯಲ್ಲಿ ಬಿತ್ತಿ, ಬೆಳೆದು ನಿಮಗೆ ಆಹಾರ ಕೊಡ್ತಿವೆ. ಬಜೆಟ್‌ನಲ್ಲಿ ಹಣ ತೆಗೆದಿಡದಿದ್ದರೇ ಪೊಲೀಸ್, ಅಧಿಕಾರಿಗಳಿಗೆ ಮಾಹಿತಿ ಕೊಡದೆ ದಿಢೀರನೇ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ತೀವ್ರ ಸ್ವರೂಕ್ಕೆ ಹೋರಾಟವನ್ನು ತೆಗೆದುಕೊಂಡು ಹೋಗಲಿದ್ದೇವೆ. ಅದಕ್ಕೂ ಮುನ್ನವೇ ಎಚ್ಚೇತ್ತುಕೊಳ್ಳಿ ಎಂದರು.

ಉಪವಾಸ ನಿರತ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಾಲ್ಕು ದಿನ ಉಪವಾಸ ಕುಳಿತಿದ್ದೇವೆ. ನಮ್ಮ ತೆರಿಗೆ ಹಣದಲ್ಲಿ ಸಂಬಳ, ಕಾರು, ಮನೆ ಪಡೆದಿರುವ ಜಿಲ್ಲಾಧಿಕಾರಿ ಸೌಜನ್ಯಕ್ಕೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ. ಇಂತಹ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆ ವರ್ಗಾ ಅಗಬೇಕು. ಇಲ್ಲದಿದ್ದರೇ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಬೇಕು, ಹೊಳಲ್ಕೆರೆ ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ವಿವಿ ಸಾಗರ, ಗಾಯತ್ರಿ ಜಲಾಶಯಕ್ಕೆ ಇಂತಿಷ್ಟು ನೀರು ಕಡ್ಡಾಯವಾಗಿ ಹರಿಸಲೇಬೇಕು. 2027ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಿಷಕಾರಕ ನೀರು ಸೇವನೆ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ಹೇಳಿವೆ. ಆದರೂ ಇಲ್ಲಿನ ಜನರಿಗೆ ನೀರು ಕೊಡುವ ಕೆಲಸ ಆಗುತ್ತಿಲ್ಲ. ಫ್ಲೋರೈಡ್ ನೀರು ಕಾರಣಕ್ಕೆ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಅಂತರ್ಜಲ ಕುಸಿದು ಜನರು ಸಂಕಷ್ಟಕ್ಕೆ ಸೌಲುಕಿದ್ದಾರೆ. ಬರಗಾಲವೇ ನಮ್ಮ ಬದುಕಾಗಿದೆ. ನಮ್ಮನ್ನು ಅಪಾಯದಿಂದ ಪಾರು ಮಾಡಬೇಕಾದ ಸರ್ಕಾರಗಳೇ ಕಣ್ಮುಚ್ಚಿ ಕುಳಿತಿರುವುದು ನೋವಿನ ಸಂಗತಿ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಹಣ ಘೋಷಿಸುವಂತೆ ನಾವ್ಯಾರೂ ಕೇಳಿರಲಿಲ್ಲ. ಅವರುಗಳೇ ಚುನಾವಣೆ

ಸಂದರ್ಭ 5,300 ಕೋಟಿ ರೂ. ಘೋಷಿಸಿದರು, ರಾಷ್ಟ್ರೀಯ ಯೋಜನೆ ಮನ್ನಣೆ ಕೊಡ್ತಿವೆ ಅಂತಾ ಬಹಿರಂಗವಾಗಿ ಹೇಳಿ, ಈಗ ಇಲ್ಲಸಲ್ಲದ ನೆಪ ಹೇಳುವುದು ಬಯಲುಸೀಮೆ ಜನರನ್ನು ಕತ್ತಲಿಗೆ ನೂಕಿದಂತೆ. ನಾವು ಬೀದಿಗಿಳಿಯುವ ಮುನ್ನವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮಹಿಳೆಯರು ಆಕ್ರೋಶ

ಕೆ.ಸಿ.ರೊಪ್ಪ ಸೇರಿ ವಿವಿಧೆಡೆಯ ಮಹಿಳೆಯರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್, ನಿಮಗೆ ನಾವು ಕೇಳ್ತಿರೋದು ಕುಡಿಯೋದಿಕ್ಕೆ ನೀರು. ಕೈಮುಗಿದು ಕೇಳ್ತಿವಿ ಭದ್ರಾ ಕಾಮಗಾರಿ ಪೂರ್ಣಗೊಳಿಸಲು ಹಣ ಕೊಡಿ. ಬೇಕೆ ಕೆಲಸ ಮುಗಿಸಿ ಎಂದು ಬೇಡಿಕೊಂಡರು. ನಾವು ಎಂದಿಗೂ ಬೇಡಿದ ಜನರಲ್ಲಿ, ಕೊಟ್ಟ ಕೈಗಳು ನಮ್ಮವು. ನಾವು ಬೆಳೆ ಬೆಳೆಯದಿದ್ದರೆ ಯಾರು ಉಳಿಯೋದೇ ಇಲ್ಲ. ಈ ಸತ್ಯ ಗೊತ್ತಿದ್ದೂ ನಮಗೆ ನೀರು ಕೊಡಲು ಯಾಕಿಷ್ಟು ಸತಾಯಿಸುತ್ತಿದ್ದೀರಿ. ಚುನಾವಣೆ ವೇಳೆ ನಮ್ಮೂರಿಗೆ ಬಂದ್ರೆ ಗ್ರಾಮಕ್ಕೆ ಬಿಟ್ಟುಕೊಳ್ಳದ ಪರಿಸ್ಥಿತಿ ತಂದೊಡ್ಡಿಕೊಳ್ಳಬೇಡಿ. ಈಗಲೇ ಎಚ್ಚೇತ್ತುಕೊಳ್ಳಿ ಎಂದು ಹೇಳಿದರು.

ಕಾರ್ಮಿಕ ಸಂಘಟನೆ ಮುಖಂಡ ಪೆನ್ನಯ್ಯ, ಮುಖಂಡರಾದ ರಮೇಶ್ ಕೋಟಿ, ಹುಲ್ಲೂರು ಕುಮಾರಸ್ವಾಮಿ, ಕಣ್ಮೇಶ್, ದೇವರಾಜ್, ಕಿರಣ್, ಸಿದ್ರಾಮಣ್ಣ, ಸಣ್ಣತಿಮ್ಮಣ್ಣ, ಸಣ್ಣೀರಪ್ಪ, ನಿಂಗಪ್ಪ, ಪ್ರಸನ್ನ, ವೆಂಕಟೇಶ್, ವೀರಭದ್ರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಣ್ಣ, ತಿಪ್ಪೇಸ್ವಾಮಿ, ಕೆಪಿಎಂ ಗಣೇಶಯ್ಯ, ಹುಣಸೆಕಟ್ಟೆ ರಾಜು, ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ್ಯ, ನರೇನಹಳ್ಳಿ ಅರುಣ್‌ಕುಮಾರ್, ಶ್ರೀನಿವಾಸನಾಯ್ಕ್ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ : ಸಚಿವ ಡಿ.ಸುಧಾಕರ್

ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ...

ಚಿತ್ರದುರ್ಗ | ಭಾರತೀಯ ವಾಸ್ತುಶಿಲ್ಪ ಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯ : ಡಾ.ಹೊನ್ನೂರ ಸ್ವಾಮಿ

ಭಾರತೀಯ ದೇವಾಲಯಗಳ ಪರಂಪರೆಗೆ ಸುದೀರ್ಘ ಹಾಗೂ ಪ್ರಾಚೀನ ಇತಿಹಾಸವಿದೆ. ಮುಂದಿನ ದಿನಗಳಲ್ಲಿ...

ಚಿತ್ರದುರ್ಗ | ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ (ಎಸ್‍ಐಆರ್)-2026ರ ಸಂಬಂಧ ಬಾಕಿ ಇರುವ ಮತದಾರರ...

ಚಿತ್ರದುರ್ಗ | ವಿಜೃಂಭಣೆಯ ನಾಯಕನಹಟ್ಟಿ ದೊಡ್ಡರಥೋತ್ಸವ

ಮಧ್ಯ ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ನಾಯಕನಹಟ್ಟಿಯಲ್ಲಿ ಶುಕ್ರವಾರ ದೊಡ್ಡರಥೋತ್ಸವ ಜರುಗಿತು. ಮಧ್ಯಾಹ್ನ...