ಜಿಲ್ಲೆಯ ಚಿಮುಲ್‌ಗೆ ನಡೆದ ಪ್ರಥಮ ಚುನಾವಣೆಯಲ್ಲಿಯೇ ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು

Date:

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ೧೩ ಚುನಾಯಿತ ನಿರ್ದೇಶಕ ಸ್ಥಾನಗಳಿಗೆ ನಡೆದ ಪ್ರಥಮ ಚುನಾವಣೆಯಲ್ಲಿ ೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಿದ್ದರೆ ೫ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವ ಮೂಲಕ ಮಿಶ್ರಫಲಿತಾಂಶದ ಹೊಸ ಇತಿಹಾಸವನ್ನು ಬರೆಯುವಲ್ಲಿ ಯಶಸ್ವಿಯಾಯಿತು.

ನಗರದ ಹೃದಯ ಭಾಗದಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಚಿಮುಲ್ ಚುನಾವಣೆಯನ್ನು ಜಿಲ್ಲಾಡಳಿತ ಬಹಳ ಶಿಸ್ತುಬದ್ದವಾಗಿ ಮತ್ತು ಪಾರದರ್ಶಕವಾಗಿ ನಡೆಸುವಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಕಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.


ಚಿಮುಲ್ ಚುನಾವಣೆಯಲ್ಲಿ ಉಡುಗೊರೆಗಳದ್ದೆ ದೊಡ್ಡ ಸದ್ದು ಮಾಡಿದ್ದು ಸುಳ್ಳಲ್ಲ.ಚುನಾವಣೆ ಪ್ರಕಟವಾದ ಬೆನ್ನಲ್ಲೇ ಡೆಲಿಗೇಟ್ಸ್ಗಳ ಮನೆಬಾಗಿಲಿಗೆ ಅಭ್ಯರ್ಥಿಗಳು ಎಡತಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಸಾಲದ್ದಕ್ಕೆ ದೇವರ ಪ್ರಸಾದ, ಆಣೆ ಪ್ರಮಾಣ, ಹಣ ಉಡುಗೊರೆಗಳ ಭರಾಟೆ ಜೋರಾಗಿತ್ತು.ಒಂದು ಅಂದಾಜಿನ ಪ್ರಕಾರ ಕೆಲ ಅಭ್ಯರ್ಥಿಗಳು ಕೆ.ಜಿಗಟ್ಟಲೆ ಬೆಳ್ಳಿ, ಕೈತುಂಬಾ ಲಕ್ಷಗಟ್ಟಲೆ ಹಣ ಕೊಟ್ಟಿದ್ದಾರೆ ಎಂಬ ಮಾತಿದೆ.ಏನೇನೂ ಲಾಭವಿಲ್ಲದ ಸ್ಥಾನಕ್ಕೆ ಇಷ್ಟೊಂದು ಹಣ ಉಡುಗೊರೆ ಕೊಡುವ ಅಗತ್ಯವೇನಿತ್ತು ಎಂಬ ಮಾತು ಜೋರಾಗಿಯೇ ಕೇಳಿಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...


ಗೌರಿಬಿದನೂರು ಕ್ಷೇತ್ರದ ಡೆಲಿಗೇಟ್ಸ್ ಮತಚಲಾಯಿಸಲು ಬಸ್ಸಿನಲ್ಲಿ ಬಂದ ಸಂದರ್ಭದಲ್ಲಿ ಮಧ್ಯಾಹ್ನ ೧ ಗಂಟೆಯಾಗಿತ್ತು. ತಮ್ಮ ಜನಪ್ರತಿನಿಧಿಯನ್ನು ಕಂಡಕೂಡಲೇ ಜೈಕಾರಹಾಕಲು ಪ್ರಾರಂಭಿಸಿದರು.ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಕೂಡ ಸಫಲವಾಗದೆ ಅಂತಿಮವಾಗಿ ಲಾಠಿಚಾರ್ಜ್ ಮಾಡಿ ಗುಂಪನ್ನು ಚೆದುರಿಸುವ ಕೆಲಸ ಮಾಡಿದ್ದು ಈ ಚುನಾವಣೆಯ ಮಟ್ಟಿಗೆ ಕಪ್ಪುಚುಕ್ಕೆಯಾಗಿ ಉಳಿಯಿತು.


ಚಿಮುಲ್ ಚುನಾವಣೆ ನಡೆಯುತ್ತಿದ್ದ ಜೂನಿಯರ್ ಕಾಲೇಜು ಆವರಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸ್ಪರ್ಧಾಳುಗಳು ಟೆಂಟುಗಳನ್ನು ಹಾಕಿದ್ದ ಪರಿಣಾಮ ರಸ್ತೆ ಕಿರಿದಾಯಿತು. ಇದರಲ್ಲೇ ವಾಹನ ಸಂಚಾರಕ್ಕೂ ಅವಕಾಶ ಮಾಡಿಕೊಟ್ಟಿದ್ದರಿಂದ ಬೆಳಗಿನಿಂದ ಸಂಜೆಯ ತನಕ ಈ ಮಾರ್ಗದುದ್ದಕ್ಕೂ ಸಂಚಾರ ಕಿರಿಕಿರಿ ಎದುರಾಗಿದ್ದು ಜನತೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಸಂಚರಿಸುತ್ತಿದ್ದು ಕಂಡು ಬಂತು.


ಸಂಜೆ ೫ ಗಂಟೆ ವೇಳೆಗೆ ಒಂದೊoದೇ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಗೆದ್ದವರು ನಡೆಸಿದ ವಿಜಯೋತ್ಸವದ ಪರಿಣಾಮ ಬಿ.ಬಿ.ರಸ್ತೆಯಲ್ಲಿ ಸಂಜೆ ೬-೩೦ರತನಕ ವಾಹನ ಸಂಚಾರಕ್ಕೆ ಭಾರೀ ವ್ಯತ್ಯಯ ಉಂಟಾಗಿತ್ತು.ಸoಪೂರ್ಣ ಫಲಿತಾಂಶ ಪ್ರಕಟವಾದ ಬಳಿಕವೇ ಬಿಬಿ ರಸ್ತೆ ಜನಸಂಚಾರಕ್ಕೆ ಮುಕ್ತವಾಯಿತು.ವಿಜಯೋತ್ಸವದ ವೇಳೆ ತಮ್ಮ ನಾಯಕರನ್ನು ಅನಾಮತ್ತು ಹೆಗಲ ಮೇಲೆ ಹೊತ್ತುಕೊಂಡೇ ಜಯಕಾರಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.


ಸಹಕಾರಿ ಕ್ಷೇತ್ರದಲ್ಲಿ ಕೂಡ ಹಣ ಉಡುಗೊರೆ ಪ್ರವಾಸ ಆನೆ ಪ್ರಮಾಣಗಳ ಮಹಾ ಹೊಳೆ ನಡೆದಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನುವುದು ಹಿರಿಯ ಸಹಕಾರಿಗಳ ಮಾತಾಗಿದೆ.ಹೈನೋದ್ಯಮಕ್ಕೆ ಚೈತನ್ಯ ತುಂಬಬೇಕಾದ ಸ್ಥಳದಲ್ಲಿ ಹಾಲು ಉತ್ಪಾದಕರ ಹಿತವನ್ನು ಕಾಯುವ ನಿರ್ದೇಶಕರು ಲಕ್ಷ ಲಕ್ಷ ಹಣ, ಬೆಳ್ಳಿಯ ಉಡುಗೊರೆಗಳನ್ನು ಡೆಲಿಗೇಟ್ಸ್ಗಳಿಗೆ ನೀಡಿ ಅವರಿಂದ ಮತಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿಯಾಗಿದೆ ಎಂಬುದನ್ನು ಹೆಸರು ಹೇಳದ ಚುನಾಯಿತ ನಿರ್ದೇಶಕರು ಹೇಳಿದ್ದು ಇಂದಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿತ್ತು.

ಇದನ್ನು ಓದಿದ್ದೀರಾ..? ಅಪಘಾತ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪೊಲೀಸ್ ವಾಹನ

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ೧೩ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಂದಿ ಹೋಬಳಿಯಲ್ಲಿ ಎನ್.ಸಿ.ವೆಂಕಟೇಶ್ ೨೪ ಮತಗಳ ಅಂತರದ- ಗೆಲುವು ಕಂಡಿದ್ದಾರೆ.೮೪ ಮತಗಳಲ್ಲಿ ವೆಂಕಟೇಶ್ ಎನ್.ಸಿ -೫೪ ಮತ, ಯಲುವಹಳ್ಳಿ ರಮೇಶ್-೩೦ ಪಡೆದಿದ್ದಾರೆ. ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ.ನಾಗರಾಜ್-೬೨ ಮತಗಳ ಅಂತರದಿoದ ಗೆಲುವು ಕಂಡಿದ್ದಾರೆ. ಒಟ್ಟು ೮೪ ಮತಗಳ ಪೈಕಿ ಕೆ.ವಿ.ನಾಗರಾಜ್-೭೨ ಮತಗಳು, ಕೆ.ಆರ್.ರಾಜಣ್ಣ-೧೨ ಮತಗಳನ್ನು ಪಡೆದಿದ್ದಾರೆ. ಮಂಚೇನಹಳ್ಳಿ ಕ್ಷೇತ್ರದಲ್ಲಿ ಜೆ.ಕಾಂತರಾಜ್ ೪೧ ಮತಪಡೆದು ೧೨ ಮತಗಳ ಅಂತರದಿoದ ಎದುರಾಳಿ ಹೆಚ್.ವಿ.ಶ್ರೀನಾಥ್ ವಿರುದ್ಧ ಗೆಲುವು ಕಂಡಿದ್ದಾರೆ. ಗೌರಿಬಿದನೂರು ಕ್ಷೇತ್ರದಲ್ಲಿ ಜಿ.ಎಲ್.ದಿನೇಶ್ ೩೮ಮತಗನ್ನು ಪಡೆದು ೧ ಮತದ ಅಂತರದಿoದ ವೆಂಕಟರೆಡ್ಡಿ ವಿರುದ್ದ ಗೆಲುವು ಕಂಡಿದ್ದಾರೆ.ಗುಡಿಬoಡೆ ಕ್ಷೇತ್ರದಿಂದ ಆದಿನಾರಾಯಣರೆಡ್ಡಿ ೨೭ ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಬೈರಾರೆಡ್ಡಿ ವಿರುದ್ದ ೯ ಮತಗಳ ಅಂತರದಿoದ ಗೆಲುವು ಕಂಡಿದ್ದಾರೆ.ಕೈವಾರ ಕ್ಷೇತ್ರದಲ್ಲಿ ಕೆ.ಎನ್.ಆವುಲಪ್ಪ ೩೭ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಎಸ್.ಎನ್.ಚಿನ್ನಪ್ಪ ವಿರುದ್ಧ ೪ ಮತಗಳ ಅಂತರಿoದ ವಿಜಯಶಾಲಿಯಾಗಿದ್ದಾರೆ.ಚಿಂತಾಮಣಿ ಕಸಬಾದಲ್ಲಿ ವೈ.ಬಿ.ಅಶ್ವತ್ಥ್ನಾರಾಯಣ-೭೦ ಮತಗಳನ್ನು ಪಡೆದು ಅವರು ತಮ್ಮ ಪ್ರತಿಸ್ಪರ್ಧಿ ಶ್ರೀನಿವಾಸಪ್ಪ ವಿರುದ್ದ ೬೫ ಮತಗಳ ಅಂತರದಿoದ ಗೆಲುವು ಕಂಡಿದ್ದಾರೆ.ಚೇಳೂರು ಕ್ಷೇತ್ರದಲ್ಲಿ ಕೆ.ಎನ್.ಕೃಷ್ಣಾರೆಡ್ಡಿ- ೪೬ ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶೇಖರ್ ವಿರುದ್ಧ ೨೦ ಮತಗಳ ಅಂತರದಲ್ಲಿ ಗೆಲುವು, ಬಾಗೇಪಲ್ಲಿ ಕ್ಷೇತ್ರದಲ್ಲಿ ಮಂಜುನಾಥರೆಡ್ಡಿ-೪೪ ಮತಗಳನ್ನು ಪಡೆದು ಪ್ರತಿಸ್ಪರ್ಧಿ ವೆಂಕಟರಮಣರೆಡ್ಡಿ ವಿರುದ್ಧ ೨೫ ಮತಗಳ ಅಂತರದಿoದ ಗೆಲುವು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಮುನಿಯಪ್ಪ-೫೬ ಮತಗಳನ್ನು ಪಡೆದು ಪ್ರತಿಸ್ಪರ್ಧಿ ಚೊಕ್ಕೇಗೌಡ ವಿರುದ್ಧ ೩೩ ಮತಗಳ ಅಂತರದ ಗೆಲುವು, ಜಂಗಮಕೋಟೆ ಕ್ಷೇತ್ರದಲ್ಲಿ ಎಂ.ರಾಮಯ್ಯ-೪೯ ಮಗಳನ್ನು ಪಡೆದು ಪ್ರತಿಸ್ಪರ್ಧಿ ಆರ್.ಶ್ರೀನಿವಾಸ್ ವಿರುದ್ಧ ೧೮ ಮತಗಳ ಅಂತರಿoದ ಗೆದ್ದಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಸುಧಾ-೨೬ ಮತಗಳನ್ನು ಪಡೆದು ಪ್ರತಿಸ್ಪರ್ಧಿ ಸುನಂದಮ್ಮ ವಿರುದ್ಧ ೩ ಮತಗಳ ಅಂತರದಿoದ ಗೆಲುವು.ಚಿಂತಾಮಣಿ ಮಹಿಳಾ ಕ್ಷೇತ್ರದಲ್ಲಿ ಎಂ.ಸುಮಾ-೩೬ ಮತಗಳನ್ನು ಪಡೆದು ಅವರು ತಮ್ಮ ಪ್ರತಿಸ್ಪರ್ಧಿ ರೂಪವಿರುದ್ಧ ೧೨ ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...