ಚಿಕ್ಕಬಳ್ಳಾಪುರ :-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಮೊದಲ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಾಗೇಪಲ್ಲಿ ತಾಲ್ಲೂಕು ವಿ. ಮಂಜುನಾಥ ರೆಡ್ಡಿ ಆಯ್ಕೆಯಾದರು.
ನಗರದ ಹೊರವಲಯದ ಚಿಮುಲ್ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಾಗೇಪಲ್ಲಿ ಕ್ಷೇತ್ರದ ನಿರ್ದೇಶಕ ವಿ. ಮಂಜುನಾಥ ರೆಡ್ಡಿ ಮತ್ತು ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಪೆರೇಸಂದ್ರ ಕ್ಷೇತ್ರದ ಕೆ.ವಿ.ನಾಗರಾಜ್ ನಾಮಪತ್ರ ಸಲ್ಲಿಸಿದರು.
ಅಂತಿಮವಾಗಿ ಕೆ.ವಿ.ನಾಗರಾಜ್ ನಾಮಪತ್ರ ವಾಪಸ್ ಪಡೆದರು ವಿ. ಮಂಜುನಾಥ ರೆಡ್ಡಿ ಅವಿರೋಧ ಆಯ್ಕೆಯಾದರು
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಚಿಮುಲ್ ಕಚೇರಿ ಎದುರು ಪಟಾಕಿ ಸಿಡಿಸಿ ತಮ್ಮ ನಾಯಕರಿಗೆ ಹೂವಿನ ಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನು ಓದಿದ್ದೀರಾ..? ರಸ್ತೆ ಕಾಮಗಾರಿ ವಿಳಂಬ ನಮಗೆಲ್ಲ ಧೂಳಿನ ಭಾಗ್ಯ ಗ್ರಾಮಸ್ಥರ ಆರೋಪ
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸಭೆ ನಡೆಸಿದರು.





