ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಜೈಲಿನಲ್ಲಿ ತಮಗೆ ಹಾಸಿಗೆ, ದಿಂಬು ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಲು ಎಂದು ಕೋರಿದ್ದ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಎಚ್ ಸಂಪೂರ್ಣವಾಗಿ ಪುರಸ್ಕರಿಸಿಲ್ಲ. ಹಾಸಿಗೆ-ದಿಂಬು ನೀಡಲು ಕೋರ್ಟ್ ನಿರಾಕರಿಸಿದೆ.
ಈ ಹಿಂದೆ ಕೋರ್ಟ್ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರು ಸಿಗರೇಟ್ ಸೇದುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಅದಾದ ಬಳಿಕ ನಟ ಎಂಬ ಕಾರಣಕ್ಕೆ ಯಾವುದೇ ವಿಶೇಷ ಸೌಲಭ್ಯ ನೀಡದಂತೆ ಆದೇಶಿಸಿತ್ತು. ಆದರೆ ನಟ ದರ್ಶನ್‌ಗೆ ದಿಂಬು, ಕನ್ನಡ, ಬಾಚಣಿಗೆ, ಬೆಡ್‌ಶೀಟ್ ಮೊದಲಾದವು ಸಿಕ್ಕಿರಲಿಲ್ಲ. ಈ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು.
ಇದನ್ನು ಓದಿದ್ದೀರಾ? ನಟ ದರ್ಶನ್ ಸೇರಿ 7 ಮಂದಿಗೆ ಜಾಮೀನು
ಕೋರ್ಟ್ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ಆದೇಶಿಸಿದೆ. ಆದರೆ ಬೆಡ್, ದಿಂಬು, ಬಾಚಣಿಗೆ ಮೊದಲಾದವುಗಳನ್ನು ನೀಡಲು ಕೋರ್ಟ್ ಅನುಮತಿಸಿಲ್ಲ. ಇದೇ ಆದೇಶ ಆರೋಪಿ ಪವಿತ್ರಾಗೂ ಅನ್ವಯವಾಗಲಿದೆ.
ತಮ್ಮನ್ನು ಬೇರೆ ಬ್ಯಾಕರ್‌ಗೆ ಸಹ ಸ್ಥಳಾಂತರಿಸುವಂತೆಯೂ ಸಹ ದರ್ಶನ್ ಮನವಿ ಮಾಡಿದ್ದರು. ಈ ಅಧಿಕಾರವನ್ನು ಜೈಲಾಧಿಕಾರಿಗಳಿಗೆ ನೀಡಿರುವ ಕೋರ್ಟ್, ನಿರ್ಣಯ ಜೈಲಾಧಿಕಾರಿಗಳಿಗೆ ಬಿಟ್ಟದ್ದು ಎಂದು ಹೇಳಿದೆ.
ಈ ಹಿಂದೆ ದರ್ಶನ್ ತಾವಿರುವ ಬ್ಯಾಕರ್‌ಗೆ ಬೆಳಕು ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಫಂಗಸ್ ಆಗಿದೆ ಎಂದು ಹೇಳಿದ್ದರು. ಆದರೆ ಜೈಲಿನ ಅಧಿಕಾರಿಗಳು ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆ ಬ್ಯಾಕರ್‌ಗೆ ಸ್ಥಳಾಂತರಿಸಿಲ್ಲ ಎಂದಿದ್ದರು.
ಇನ್ನು ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.





