ಹೈನುಗಾರಿಕೆಯಿಂದ ಬದುಕು ಕಟ್ಟಿಕೊಳ್ಳುತ್ತಿರುವ ಹೈನುಗಾರರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಸರ್ಕಾರದ ಪ್ರೋತ್ಸಾಹ ಧನ ಬಾರದೇ ಇರುವುದರಿಂದ ಹೈನುಗಾರರು ಹೈರಾಣಾಗಿದ್ದು, ಪ್ರೋತ್ಸಾಹಧನದ ನಿರೀಕ್ಷೆಯಲ್ಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೊಡವೂರು ರವಿರಾಜ ಹೆಗಡೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವರ್ಷದ ಗರಿಷ್ಠ ತಾಪಮಾನ, ಬೆಲೆ ಏರಿಕೆ, ಚಿತ್ರ-ವಿಚಿತ್ರವಾದ ರೋಗಗಳಿಂದ ಹೈನುಗಾರಿಕೆ ನಲುಗಿ ಹೋಗಿದೆ. ಇಂತಹ ಸಮಯದಲ್ಲಿ ಪ್ರೋತ್ಸಾಹ ಧನ ಪಾವತಿಯಾದರೆ, ಹಾಲಿನ ದರ ಪರಿಷ್ಕರಣೆಗೊಂಡರೆ ಹೈನುಗಾರಿಕೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ತೋಗಲೂರ ಗ್ರಾಮದಲ್ಲಿ ನೀರಿನ ಸಮಸ್ಯೆ; ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಪರದಾಟ
“ಹೈನುಗಾರಿಕೆಯಿಂದ ವಿಮುಖರಾಗಿರುವ ರೈತರಲ್ಲೂ ಹೊಸ ಚೈತನ್ಯ ತುಂಬಬೇಕಾದರೆ ಸರ್ಕಾರ ಹೈನುಗಾರರಿಗೆ ನೀಡಿದ ಆಶ್ವಾಸನೆಯಂತೆ ಒಂದು ಲೀಟರ್ ಪ್ರೋತ್ಸಾಹ ಧನವನ್ನು ₹5ರಿಂದ ₹7ಕ್ಕೆ ಹೆಚ್ಚಿಸಬೇಕು. ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಒಮ್ಮಗೇ ಪಾವತಿಸಬೇಕು. ಜೊತೆಗೆ ಹಾಲಿನ ಧಾರಣೆಯನ್ನು ಕೂಡಲೇ ಪರಿಷ್ಕರಿಸಬೇಕು” ಎಂದು ಆಗ್ರಹಿಸಿದರು.




